»   » ಏ.12 ಡಾ.ರಾಜ್‌ರ ಎರಡನೆಯ ಪುಣ್ಯ ಸ್ಮರಣೆ

ಏ.12 ಡಾ.ರಾಜ್‌ರ ಎರಡನೆಯ ಪುಣ್ಯ ಸ್ಮರಣೆ

Subscribe to Filmibeat Kannada

ಬೆಂಗಳೂರು, ಏ.11: ಕರ್ನಾಟಕ ರತ್ನ,ಗಾನಗಂಧರ್ವ,ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾ.ರಾಜ್‌ಕುಮಾರ್ ಅವರ ಎರಡನೆಯ ಪುಣ್ಯಸ್ಮರಣೆಗೆ ನಂದಿನಿ ಬಡಾವಣೆಯ ಕಂಠೀರವ ಸ್ಟುಡಿಯೋಬಳಿ ನಿರ್ಮಿಸಿರುವ ಡಾ.ರಾಜ್ ಸಮಾಧಿ ವಿವಿಧ ಪುಷ್ಪಗಳಿಂದ ಅಲಂಕೃತವಾಗಿದೆ.

ಡಾ.ರಾಜ್ ಸಮಾಧಿ ಸ್ಥಳಕ್ಕೆ ಇಂದು ಪಾರ್ವತಮ್ಮ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಆಗಮಿಸಿ ಏ.12ರಂದು ನಡೆಯುವ ಡಾ.ರಾಜ್‌ರ ಎರಡನೆ ಪುಣ್ಯ ಸ್ಮರಣೆಯ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ಡಾ.ರಾಜ್‌ರ ಸಮಾಧಿಗೆ ಸಿಂಗರಿಸುವ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ ಡಾ.ರಾಜ್ ಅಭಿಮಾನಿಗಳ ಸಂಘ, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘಗಳು ಕೈಜೋಡಿಸಿವೆ.

ಡಾ.ರಾಜ್ ಅವರ ಎರಡನೆಯ ಪುಣ್ಯಸ್ಮರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಲು ಅಭಿಮಾನಿ ಸಂಘಗಳು ವಿವಿಧ ಆಸ್ಪತ್ರೆಗಳ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿವೆ. ಶುಕ್ರವಾರ ಡಾ.ರಾಜ್ ಕುಟುಂಬ ಸಮಾಧಿಗೆ ಪೂಜೆ ಸಲ್ಲಿಸಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ಸಾಗರ ಹರಿದು ಬರಲಿದೆ. ಯಾವುದೇ ಅಹಿತ ಘಟನೆ ನಡೆಯದಂತೆ ಸೂಕ್ತ ಭದ್ರತೆ ಒದಗಿಸಲಾಗಿದೆ.

ಅಣ್ಣಾವ್ರ ಅಭಿಮಾನಿಗಳು ಸಾಲಿನಲ್ಲಿ ಬಂದು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಗುರುವಾರ ಮಧ್ಯಾಹ್ನದಿಂದ ಸಮಾಧಿ ಸುತ್ತಮುತ್ತಲ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada