»   » ದಂತಚೋರನ ಪತ್ನಿಯಾಗಿ ದಂತದಗೊಂಬೆ ವಿಜಯಲಕ್ಷ್ಮಿ

ದಂತಚೋರನ ಪತ್ನಿಯಾಗಿ ದಂತದಗೊಂಬೆ ವಿಜಯಲಕ್ಷ್ಮಿ

Posted By:
Subscribe to Filmibeat Kannada

ನರಹಂತಕ, ದಂತಚೋರ, ಕಾಡುಗಳ್ಳ ವೀರಪ್ಪನ್ ಕುಖ್ಯಾತ ಜೀವನ ಚರಿತ್ರೆಯನ್ನು 'ಅಟ್ಟಹಾಸ' ಚಿತ್ರದ ಮೂಲಕ ಎಎಂಆರ್ ರಮೇಶ್ ಬೆಳ್ಳಿತೆರೆಗೆ ತರುತ್ತಿರುವುದು ಗೊತ್ತೆ ಇದೆ. ಪ್ರಬುದ್ಧ ನಟ ಕಿಶೋರ್ 'ವೀರಪ್ಪನ್' ಆಗಿ ಬೆಳ್ಳಿಪರದೆ ಮೇಲೆ ಅಟ್ಟಹಾಸ ಮೆರೆಯಲಿದ್ದಾರೆ. ಆದರೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪಾತ್ರ ಯಾರು ಪೋಷಿಸಲಿದ್ದಾರೆ?

ಈ ಪ್ರಶ್ನೆಗೆ ಈಗ ಉತ್ತರ ಬಹುತೇಕ ಸಿದ್ಧವಾಗಿದೆ. ತಮಿಳಿನ ಅರ್ಧ ಡಜನ್ ಚಿತ್ರಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಎಂಬ ದಂತದ ಗೊಂಬೆಯನ್ನು ಮುತ್ತುಲಕ್ಷ್ಮಿ ಪಾತ್ರಕ್ಕೆ ಆಯ್ಕೆ ಮಾಡಲು ಮುಂದಾಗಿದ್ದಾರೆ ರಮೇಶ್. ಈಗಾಗಲೆ ಆಕೆಯನ್ನು ಸಂಪರ್ಕಿಸಿದ್ದು ಮಾತುಕತೆ ನಡೆಯುತ್ತಿದೆ.

'ರೈಸ್ ಅಂಡ್ ಫಾಲ್' ಎಂಬುದು ಅಟ್ಟಹಾಸ ಚಿತ್ರದ ಅಡಿಬರಹ. ಎಸ್‌ಟಿಎಫ್ ಮುಖ್ಯಸ್ಥ ವಿಜಯ್ ಕುಮಾರ್ ಪಾತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಾಣಿಸಲಿದ್ದು ವೀರಪ್ಪನ್‍ನನ್ನು ಮುಗಿಸಲಿದ್ದಾರೆ. ಡಾ.ರಾಜ್ ಅಪಹರಣ, 108 ದಿನಗಳ ಒತ್ತೆ, ಬಿಡುಗಡೆ, ಆನಂತರದ ಬೆಳವಣಿಗೆಗಳ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Tamil actress Vijayalakshmi Agathiyan to plays Veerappan's wife Muthulakshmi in Kannada, Tamil bilingual film Attahasa. The movie is being directing by AMR Ramesh. Actor Kishore will play the lead role as Veerappan, while Arjun and Ravi Kalai will play Vijayakumar and Senthamarai Kannan respectively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada