twitter
    For Quick Alerts
    ALLOW NOTIFICATIONS  
    For Daily Alerts

    'ಮಿಲನ'ಕ್ಕೆ 11 ವರ್ಷ: ನೀವು ತಿಳಿಯಬೇಕಾದ ಕುತೂಹಲಕಾರಿ ಅಂಶಗಳು

    |

    ನಟ ಪುನೀತ್ ರಾಜ್ ಕುಮಾರ್ ಸೂಪರ್ ಹಿಟ್ ಸಿನಿಮಾಗಳ ಸರದಾರ. ಅಪ್ಪು ತಮ್ಮ ಕೆರಿಯರ್ ನಲ್ಲಿ ಸಾಕಷ್ಟು ಬ್ಲಾಕ್ ಬಾಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಆ ಸಾಲಿನಲ್ಲಿ ನಿಲ್ಲುವ ಪ್ರಮುಖ ಸಿನಿಮಾ 'ಮಿಲನ'.

    ಕೆಲವು ಸಿನಿಮಾಗಳು ಎಲ್ಲರನ್ನು ಮೆಚ್ಚಿಸುತ್ತವೆ. ನೂರಕ್ಕೆ ನೂರು ಜನರನ್ನು ತೃಪ್ತಿ ಪಡಿಸದಿದ್ದರು, ಶೇಕಡ ತೊಂಬತ್ತೊಂಬತ್ತು ಜನರನ್ನು ಮೆಚ್ಚಿಸಿರುತ್ತದೆ. ಈ ರೀತಿಯ ಒಂದು ಸಿನಿಮಾ 'ಮಿಲನ'.

    'ಗಣೇಶ'ನ ಮುಂದೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಅಪ್ಪು-ರಾಘಣ್ಣ'ಗಣೇಶ'ನ ಮುಂದೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಅಪ್ಪು-ರಾಘಣ್ಣ

    ಅಂದಹಾಗೆ, ಪುನೀತ್ ರಾಜ್ ಕುಮಾರ್, ಪಾರ್ವತಿ, ಪೂಜಾ ಗಾಂಧಿ ನಟಿಸಿದ್ದ ಈ ಅದ್ಭುತ ಸಿನಿಮಾ ಬಂದು ಈಗ 11 ವರ್ಷ ಆಗಿದೆ. ಈ ವೇಳೆ ಸಿನಿಮಾದ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ. ಮುಂದೆ ಓದಿ...

    ಮಲ್ಪಿಪ್ಲೆಕ್ಸ್ ನಲ್ಲಿ ದಾಖಲೆ

    ಮಲ್ಪಿಪ್ಲೆಕ್ಸ್ ನಲ್ಲಿ ದಾಖಲೆ

    'ಮಿಲನ' ಒಂದು ವರ್ಷಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳಲ್ಲಿ ಒಂದಾಗಿದೆ. ವಿಶೇಷ ಅಂದರೆ, 600ಕ್ಕೂ ಹೆಚ್ಚು ದಿನ ಬೆಂಗಳೂರಿನ ಮಲ್ಟಿಪ್ಲೆಕ್ಸ್ ನಲ್ಲಿ ಓಡುವ ಮೂಲಕ ಈ ಚಿತ್ರದ ದಾಖಲೆಯನ್ನು ನಿರ್ಮಾಣ ಮಾಡಿದೆ. 'ಮಿಲನ' ಚಿತ್ರವನ್ನು ಹೊರತು ಪಡಿಸಿ ಬೇರೆ ಯಾವ ಸಿನಿಮಾ ಕೂಡ ಮಲ್ಟಿಪ್ಲೆಕ್ಸ್ ನಲ್ಲಿ ಅಷ್ಟೊಂದು ದಿನ ಸತತ ಪ್ರದರ್ಶನ ಕಂಡಿಲ್ಲ.

    30 ಕೋಟಿ ಕಲೆಕ್ಷನ್

    30 ಕೋಟಿ ಕಲೆಕ್ಷನ್

    'ಮಿಲನ' ಸಿನಿಮಾಗೆ ಬಂಡವಾಳ ಹಾಕಿದ್ದು, 5 ಕೋಟಿ. ಆದರೆ, ಅದರಿಂದ ಬಂದಿದ್ದು, ಬರೋಬ್ಬರಿ 30 ಕೋಟಿ. ಹೌದು, ಪಕ್ಕಾ ಫ್ಯಾಮಿಲಿ ಸಿನಿಮಾವಾಗಿದ್ದ 'ಮಿಲನ' ದೊಡ್ಡ ಕಲೆಕ್ಷನ್ ಮಾಡಿತು. ಕನ್ನಡ ಚಿತ್ರಗಳ ಪೈಕಿ ಅತಿ ಹೆಚ್ಚು ಹಣ ಮಾಡಿದ ಸಿನಿಮಾಗಳಲ್ಲಿ ಇದು ಒಂದು.

    ಮತ್ತೊಂದು ರಿಯಾಲಿಟಿ ಶೋಗೆ ಸಜ್ಜಾದ ಪುನೀತ್ ರಾಜ್ ಕುಮಾರ್ ಮತ್ತೊಂದು ರಿಯಾಲಿಟಿ ಶೋಗೆ ಸಜ್ಜಾದ ಪುನೀತ್ ರಾಜ್ ಕುಮಾರ್

    ಕನ್ನಡಕ್ಕೆ ಬಂದ ಪಾರ್ವತಿ

    ಕನ್ನಡಕ್ಕೆ ಬಂದ ಪಾರ್ವತಿ

    ಈ ಸಿನಿಮಾದ ಮೂಲಕ ಸೌತ್ ಚಿತ್ರರಂಗದ ಪ್ರತಿಭಾವಂತ ನಟಿ ಪಾರ್ವತಿ ಕನ್ನಡಕ್ಕೆ ಬಂದರು. ಇದು ಅವರ ನಾಲ್ಕನೇ ಸಿನಿಮಾ ಆಗಿತ್ತು. ಮಲೆಯಾಳಂ ನಂತರ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಂಡರು. ಇದು ಅವರು ಮೊದಲ ಬಾರಿಗೆ ಮಲೆಯಾಳಂ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಿದ್ದ ಚಿತ್ರ.

    ಪುನೀತ್ ಗೆ ರಾಜ್ಯ ಪ್ರಶಸ್ತಿ

    ಪುನೀತ್ ಗೆ ರಾಜ್ಯ ಪ್ರಶಸ್ತಿ

    ಈ ಸಿನಿಮಾ ಕಮರ್ಷಿಯಲ್ ಆಗಿ ಹಿಟ್ ಆಗುವುದರ ಜೊತೆಗೆ ಪ್ರಶಸ್ತಿಗಳನ್ನು ಕೂಡ ತಂದು ಕೊಟಿತು. ಈ ಸಿನಿಮಾದ ಮೂಲಕ ಪುನೀತ್ ರಾಜ್ಯ ಪ್ರಶಸ್ತಿ ಪಡೆದರು. ಮನೋ ಮೂರ್ತಿ ಮತ್ತು ಸೋನು ನಿಗಂ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

    ರಿಮೇಕ್, ಡಬ್ ಆಗಿದೆ

    ರಿಮೇಕ್, ಡಬ್ ಆಗಿದೆ

    'ಮಿಲನ' ಸಿನಿಮಾ ಮಲೆಯಾಳಂ ಭಾಷೆಗೆ ಡಬ್ ಆಗಿದೆ. ಒಡಿಯಾ ಹಾಗೂ ಬೆಂಗಾಲಿ ಭಾಷೆಗೆ ರಿಮೇಕ್ ಆಗಿದೆ. ವಿಶೇಷ ಅಂದರೆ, ಬೆಂಗಾಲಿ ಭಾಷೆಗೆ ರಿಮೇಕ್ ಆದ ಎರಡನೇ ಕನ್ನಡ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಮುಂಚೆ 'ಮುಂಗಾರು ಮಳೆ' ಬೆಂಗಾಲಿಗೆ ರಿಮೇಕ್ ಆಗಿತ್ತು.

    ಯಶಸ್ವಿ ಪ್ರದರ್ಶನಗಳು

    ಯಶಸ್ವಿ ಪ್ರದರ್ಶನಗಳು

    ಈ ಚಿತ್ರ 137 ಸೆಂಟರ್ ಗಳಲ್ಲಿ 50 ದಿನಗಳನ್ನು, 50 ಸೆಂಟರ್ ಗಳಲ್ಲಿ 100 ದಿನಗಳನ್ನು ಹಾಗೂ 15 ಸೆಂಟರ್ ಗಳಲ್ಲಿ 200 ದಿನಗಳನ್ನು ಪೂರೈಸಿದೆ. ಒಂದು ವರ್ಷ ಪೂರೈಸಿದ ಈ ಸಿನಿಮಾ 600 ದಿನ ಬೆಂಗಳೂರಿನ ಪಿವಿಆರ್ ಮಲ್ಟಿಪ್ಲೆಕ್ಸ್ ಗಳಲ್ಲಿ ಯಶಸ್ಸಿಯಾಗಿ ಪ್ರದರ್ಶನ ಕಂಡಿತ್ತು.

    ಮೊದಲ ಬಾರಿಗೆ ಒಂದಾಗಿತ್ತು

    ಮೊದಲ ಬಾರಿಗೆ ಒಂದಾಗಿತ್ತು

    ನಿರ್ದೇಶಕ ಮಿಲನ ಪ್ರಕಾಶ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಜೊತೆಗೆ ಕೆಲಸ ಮಾಡಿದ್ದರು. ನಟಿ ಪೂಜಾ ಗಾಂಧಿ ಹಾಗೂ ಪುನೀತ್ ಜೋಡಿಯ ಮೊದಲ ಚಿತ್ರ ಇದಾಗಿತ್ತು.

    English summary
    11 years for kannada actor Puneeth Rajkumar and Parvathy's 'Milana' movie.
    Friday, September 14, 2018, 17:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X