5 ನಿಮಿಷದಲ್ಲಿ 'ಕೆಜಿಎಫ್' ಚಿತ್ರದ 1100 ಟಿಕೆಟ್ ಸೇಲ್ ಮಾಡಿದ ಚಿತ್ರಮಂದಿರ.!

ಕೆಜಿಎಫ್ ಚಿತ್ರ ಬಿಡುಗಡೆಗೆ ಕೇವಲ ಮೂರು ದಿನ ಮಾತ್ರ ಬಾಕಿ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಕೆಜಿಎಫ್ ಟಿಕೆಟ್ ಗಳು ಗುಲಾಬ್ ಜಾಮೂನ್ ರೀತಿ ಸೇಲ್ ಆಗ್ತಿದೆ. ಆಲ್ ಮೋಸ್ಟ್ ಬುಕ್ಕಿಂಗ್ ಅವಕಾಶ ನೀಡಲಾಗಿದ್ದ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಇದನ್ನ ಹೊರತು ಪಡಿಸಿ ಅನೇಕ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಶೋ ಬೆಳಿಗ್ಗೆ ಆರು ಗಂಟೆಗೆ ಆರಂಭವಾಗ್ತಿದೆ. ಇನ್ನು ಈ ಹಿಂದಿನ ಚಿತ್ರಗಳಿಗಿಂತ 'ಕೆಜಿಎಫ್' ಚಿತ್ರದ ಟಿಕೆಟ್ ಬೆಲೆ ಭಾರಿ ದುಬಾರಿಯಾಗಿದೆ.

ವಿಶೇಷ ಅಂದ್ರೆ, ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರದಲ್ಲಿ ಬುಕ್ಕಿಂಗ್ ಓಪನ್ ಆದ ಕೇವಲ 5 ನಿಮಿಷದಲ್ಲಿ ಬರೋಬ್ಬರಿ 1100 ಟಿಕೆಟ್ ಸೇಲ್ ಆಗಿದೆ. ಇದು ನಿಜಕ್ಕೂ ಗ್ರೇಟ್ ಎನ್ನುವ ವಿಷ್ಯವೇ ಸರಿ. ಅಷ್ಟಕ್ಕೂ, ಅದು ಯಾವ ಚಿತ್ರಮಂದಿರ ಮತ್ತು ಒಟ್ಟು ಎಷ್ಟು ಟಿಕೆಟ್ ಸೇಲ್ ಆಗಿದೆ?

ಊರ್ವಶಿ ಚಿತ್ರಮಂದಿರದಲ್ಲಿ ಕೆಜಿಎಫ್ ಹವಾ

ಊರ್ವಶಿ ಚಿತ್ರಮಂದಿರದಲ್ಲಿ ಕೆಜಿಎಫ್ ಹವಾ

ಸಾಮಾನ್ಯವಾಗಿ ತಮಿಳು, ಹಿಂದಿ, ಇಂಗ್ಲೀಷ್ ಸಿನಿಮಾಗಳಲ್ಲೇ ಹೆಚ್ಚು ಪ್ರದರ್ಶನ ಮಾಡುವ ಊರ್ವಶಿ ಚಿತ್ರಮಂದಿರದಲ್ಲಿ ಕೆಜಿಎಫ್ ಸಿನಿಮಾ ಮೊದಲ ದಿನವೇ ಬಿಡುಗಡೆಯಾಗ್ತಿದೆ. ಮೊದಲ ದಿನ ಆರು ಶೋ ಪ್ರದರ್ಶನ ಮಾಡ್ತಿದ್ದು, ಈಗಾಗಲೇ ಮೂರು ಶೋಗಳು ಸೋಲ್ಟ್ ಔಟ್ ಆಗಿದೆ.

5 ನಿಮಿಷದಲ್ಲಿ 1100 ಟಿಕೆಟ್

5 ನಿಮಿಷದಲ್ಲಿ 1100 ಟಿಕೆಟ್

ನಿನ್ನೆ ಊರ್ವಶಿ ಚಿತ್ರಮಂದಿರದಲ್ಲಿ ಬುಕ್ಕಿಂಗ್ ಅವಕಾಶ ಮಾಡಲಾಗಿತ್ತು. ಬುಕ್ಕಿಂಗ್ ಓಪನ್ ಆದ ಕೇವಲ 5 ನಿಮಿಷದಲ್ಲಿ 1100 ಟಿಕೆಟ್ ಸೇಲ್ ಆಗಿದೆ ಎಂದು ಸ್ವತಃ ಚಿತ್ರಮಂದಿರದವರೇ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದ್ದಾರೆ. 5 ನಿಮಿಷದಲ್ಲಿ 1100 ಟಿಕೆಟ್ ಅಂದ್ರೆ, ಕೆಜಿಎಫ್ ಚಿತ್ರದ ಹವಾ ಎಷ್ಟಿರಬೇಕು ಎಂದು ಊಹಿಸಬಹುದು.

ಮೊದಲ ದಿನ 4500 ಟಿಕೆಟ್

ಮೊದಲ ದಿನ 4500 ಟಿಕೆಟ್

5 ನಿಮಿಷದಲ್ಲಿ 1100 ಟಿಕೆಟ್ ಸೇಲ್ ಮಾಡಿದ್ದ ಊರ್ವಶಿ ಚಿತ್ರಮಂದಿರ ಮೊದಲ ದಿನದ ಅಂತ್ಯಕ್ಕೆ ಒಟ್ಟು 4500 ಟಿಕೆಟ್ ಮಾರಾಟ ಮಾಡಿದೆಯಂತೆ. ಈ ಚಿತ್ರಮಂದಿರದಲ್ಲಿ ಒಂದು ಟಿಕೆಟ್ ಬೆಲೆ ಪ್ಲಾಟಿನಂ 350, ಗೋಲ್ಡ್ 256, ಸಿಲ್ವರ್ 200 ರೂಪಾಯಿ.

ಭಾನುವಾರದವರೆಗೂ ಬುಕ್ಕಿಂಗ್

ಭಾನುವಾರದವರೆಗೂ ಬುಕ್ಕಿಂಗ್

ಊರ್ವಶಿ ಚಿತ್ರಮಂದಿರ 4k ತಂತ್ರಜ್ಙಾನವನ್ನ ಹೊಂದಿದ್ದು, ಭಾನುವಾರದವರೆಗೂ ಕೆಜಿಎಫ್ ಚಿತ್ರದ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ. ಯಶ್ ಅಭಿನಯದ ಕೆಜಿಎಫ್ ಡಿಸೆಂಬರ್ 21 ರಂದು ಜಗತ್ತಿನಾದ್ಯಂತ ಐದು ಭಾಷೆಯಲ್ಲಿ ತೆರೆಕಾಣ್ತಿದೆ.

More from Filmibeat

English summary
Kannada actor Yash's K.G.F movie has created many landmarks from the start. now kgf movie ticket booing opened all over Karnataka. 1100 tickets sold in 5 minutes of starting the booking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X