»   » ನಟ/ನಟಿ ಬೇಕಾಗಿದ್ದಾರೆ, ನೀವೂ ಒಂದು ಕೈ ನೋಡಿ

ನಟ/ನಟಿ ಬೇಕಾಗಿದ್ದಾರೆ, ನೀವೂ ಒಂದು ಕೈ ನೋಡಿ

Subscribe to Filmibeat Kannada

ಕಾಮನಬಿಲ್ಲು, ಆಟೋರಾಜ, ಗಲಾಟೆ ಸಂಸಾರ, ನಾನಿನ್ನ ಬಿಡಲಾರೆ ಮುಂತಾದ ಸದ್ದು ಮಾಡಿದ ಚಿತ್ರಗಳನ್ನು ನಿರ್ಮಿಸಿದ ಶ್ರೀ ಜೈಮಾತಾ ಕಂಬೈನ್ಸ್‌ ‘ಖುಷಿ’ ಎಂಬ ಸಿನಿಮಾವನ್ನು ಸದ್ಯದಲ್ಲೇ ನಿರ್ಮಿಸಲಿದೆ.

ಈ-ಟಿವಿಗೆ ಒಂದು ಸಂಗೀತದ ವಿಡಿಯೋ ನಿರ್ದೇಶಿಸಿರುವ ಪ್ರಕಾಶ್‌ ಎಂಬಾತನಿಗೆ ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿಕೊಡಲಾಗಿದೆ. ‘ನಿನಗಾಗಿ’ ಖ್ಯಾತಿಯ ವಿಜಯ ರಾಘವೇಂದ್ರ ನಾಯಕರಾಗಿ ಗೊತ್ತಾಗಿದ್ದಾರೆ. ಲೀಲಾವತಿ, ಅನಂತನಾಗ್‌ ಮತ್ತು ಅವಿನಾಶ್‌ ಪ್ರಮುಖ ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ. ಮಟ್ಟು ಹಾಕುವ ಜವಾಬ್ದಾರಿಯನ್ನು ಗುರುಕಿರಣ್‌ಗೆ ಕೊಡಲಾಗಿದೆ. ಇಷ್ಟಾಗಿಯೂ ಇನ್ನೂ ಕೆಲವು ಪಾತ್ರಗಳಿಗೆ ಹೊಸ ಮುಖಗಳ ಶೋಧ ನಡೆದಿದೆ. 20+ ವಯಸ್ಸಿನ ಪ್ರತಿಭಾವಂತರಿಗೆ ಆದ್ಯತೆ ಇದೆ. ನಾಯಕಿ ಇನ್ನೂ ಗೊತ್ತಾಗಿಲ್ಲವಾದ್ದರಿಂದ ಅದೃಷ್ಟ ಇದ್ದರೆ ನಿಮ್ಮಲ್ಲೇ ಯಾರೋ ಒಬ್ಬರಿಗೆ ಆ ಅವಕಾಶ ಒಲಿಯಬಹುದು.

ಆಸಕ್ತರು (080) 98452-04366 ನಂಬರಿಗೆ ಫೋನಾಯಿಸಿ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ವಿಜಯ ರಾಘವೇಂದ್ರನ ಕನಸು ನನಸಾಗಿದ್ದು..

Post your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada