»   » ಖ್ಯಾತ ನಿರ್ದೇಶಕ ಮೃಣಾಲ್‌ಸೇನ್‌ಗೆ ದಾದಾ ಸಾಹೇಬ್‌ ಫಾಲ್ಕೆಪ್ರಶಸ್ತಿ

ಖ್ಯಾತ ನಿರ್ದೇಶಕ ಮೃಣಾಲ್‌ಸೇನ್‌ಗೆ ದಾದಾ ಸಾಹೇಬ್‌ ಫಾಲ್ಕೆಪ್ರಶಸ್ತಿ

Subscribe to Filmibeat Kannada

ನವದೆಹಲಿ: ಪ್ರಸಕ್ತ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಮೃಣಾಲ್‌ಸೇನ್‌ ಅವರಿಗೆ ಸಂದಿದೆ.

ಮೃಣಾಲ್‌ಸೇನ್‌ ಅವರು ಭಾರತೀಯ ಚಲನ ಚಿತ್ರೋದ್ಯಮಕ್ಕೆ ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಫೆ.2ರಂದು ನಡೆಯಲಿರುವ 51ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ, ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಪ್ರಶಸ್ತಿಯನ್ನು ವಿತರಿಸುವರು.

ಬಾಂಗ್ಲಾದ ಭಾಗವಾಗಿರುವ ಫರೀದ್‌ಪುರ್‌ನಲ್ಲಿ 1923ರ ಮೇ 14ರಂದು ಸೇನ್‌ ಜನಿಸಿದರು. 1998ರಿಂದ 5 ವರ್ಷಗಳವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಸೇನ್‌ರ ‘ಖಾರಿಜ್‌’ ಚಿತ್ರಕ್ಕೆ ಕ್ಯಾನೆ , ವೆನ್ನಿಸ್‌ ಮತ್ತು ಬರ್ಲಿನ್‌ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿದೆ.

ಸೇನ್‌ಗೆ ಒಲಿದ ಪ್ರಶಸ್ತಿಗಳು ಹತ್ತಾರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸೇನ್‌ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ . ಇವರು ನಿರ್ದೇಶಿಸಿದ ನೀಲ್‌ ಆಕಾಶೇರ್‌ ನಿಚೆ, ಇಂಟರ್ವ್ಯೂ, ಒಕ ಉರಿ ಕಥಾ, ಜೆನೆಸಿಸ್‌, ಮಹಾಪೃಥ್ವಿ, ಏಕ್‌ ದಿನ್‌ ಪ್ರತಿದಿನ್‌, ಏಕ್‌ ದಿನ ಅಚಾನಕ್‌ , ಭುವನ್‌ ಶೋಮ್‌, ಕಂದಹಾರ್‌, ಅಂತರೀನ್‌ ಚಿತ್ರಗಳು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿವೆ. ಈಗ ಇವರಿಗೆ ಫಾಲ್ಕೆ ಪ್ರಶಸ್ತಿ ಗೌರವವೂ ಸಂದಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada