»   » ರಕ್ಷಿತಾಗೆ ಬಿಳಿ ಗಂಡ ಬೇಕಂತೆ!?

ರಕ್ಷಿತಾಗೆ ಬಿಳಿ ಗಂಡ ಬೇಕಂತೆ!?

Subscribe to Filmibeat Kannada

‘ದೇವರು ನನ್ನನ್ನು ಯಾವಾಗಲೂ ಖುಷಿಯಾಗಿಟ್ಟಿದ್ದಾನೆ. ನನಗಿನ್ನೇನು ಬೇಕು...? ಒಳ್ಳೆಯ ಗಂಡ ಸಿಕ್ಕರೆ ಸಾಕು.’ ಇದು ಸುಂಟರಗಾಳಿ ರಕ್ಷಿತಾರ ಲೇಟೆಸ್ಟ್‌ ಬಯಕೆ.

ಮಾಧ್ಯಮ ಮಿತ್ರರೊಬ್ಬರ ಜೊತೆ ನಡೆದ ಮಾತುಕತೆಯಲ್ಲಿ ರಕ್ಷಿತಾ, ಪಡ್ಡೆಗಳು ಮತ್ತಷ್ಟು ಬೆರಗಾಗುವಂತೆ ಮಾತಿನ ಬಾಂಬ್‌ಗಳ ಸಿಡಿಸಿದ್ದಾರೆ.

ನಾನು ಇನ್ನೆರಡು ವರ್ಷದೊಳಗೆ ಮದುವೆಯಾಗುತ್ತೇನೆ. ಡೀನೋ ಮೋರಿಯೋ ತರಹದ ಹುಡುಗ ಬೇಡ. ಪ್ರೀತಿ ತುಂಬಿದ ಸರಳ ಹುಡುಗನಿದ್ದರೆ ಸಾಕು. ಆದರೆ ಆತ ಬೆಳ್ಳಗಿದ್ದರೆ ಒಳ್ಳೆಯದು ಎನ್ನುವುದು ರಕ್ಷಿತಾರ ಕಂಡೀಷನ್‌.

ಪಾಪ ಬಟ್ಟೆ ಅಲರ್ಜಿ! : ‘ಮಂಡ್ಯ’ಚಿತ್ರದಲ್ಲಿ ದರ್ಶನ್‌ ಜೊತೆ ಮೈಮರೆತು ಕುಣಿದಿದ್ದ ರಕ್ಷಿತಾಗೆ, ಆ ಚಿತ್ರದಲ್ಲಿ ತಾನು ತೊಟ್ಟ ಉಡುಗೆಯ ಬಗ್ಗೆ ಬೇಸರವಿಲ್ಲ. ‘ಅಯ್ಯ’ ಮತ್ತು ‘ಕಲಾಸಿಪಾಳ್ಳ’ಚಿತ್ರಗಳಿಗೆ ಹೋಲಿಸಿದರೆ ಇದೇನೂ ಅಲ್ಲ ಎನ್ನುವ ರಕ್ಷಿತಾ ಮೇಡಂ, ಎಷ್ಟು ಕಡಿಮೆ ಬಟ್ಟೆ ಧರಿಸುತ್ತೇವೋ ಅಷ್ಟು ಹೆಚ್ಚು ಸಂಭಾವನೆ ಸಿಕ್ಕುತ್ತದೆ ಎಂದು ಗಾಂಧಿನಗರ ಬೆಚ್ಚುವಂತೆ ಪ್ರತಿಕ್ರಿಯಿಸಿದ್ದಾರೆ.

ಅಂತಹ ಬಟ್ಟೆ ತೊಟ್ಟಿದ್ದಕ್ಕೆ, ಮೈ ತೋರಿಸಿದ್ದಕ್ಕೆ ಪಶ್ಚಾತ್ತಾಪವೇನಿಲ್ಲ. ಯಾರಾದರೂ ಅಂತಹ ಪಾತ್ರ ಆರಂಭಿಸಲೇ ಬೇಕಿತ್ತು. ಆ ಕೊರತೆಯನ್ನು ನಾನು ನೀಗಿಸಿದ್ದೇನೆ ಅಷ್ಟೆ ಅನ್ನೋದು ಆಯಮ್ಮನ ಒಗ್ಗರಣೆ.

ನನಗೀಗ 22 ವರ್ಷ ವಯಸ್ಸು. ಈಗಾಗಲೇ ಕನ್ನಡ, ತಮಿಳು ಹಾಗೂ ತೆಲುಗು ಸೇರಿದಂತೆ ಒಟ್ಟು 26 ಚಿತ್ರಗಳಲ್ಲಿ ನಟಿಸಿದ್ದೇನೆ. ಈ ವರ್ಷ ಕವಿತಾ ಲಂಕೇಶ್‌ ನಿರ್ದೇಶಿಸುತ್ತಿರುವ ತನನಂ ತನನಂ, ಸುಂಟರಗಾಳಿ, ನೀನೆಲ್ಲೋ ನಾನಲ್ಲೆ ಹಾಗೂ ಹುಬ್ಬಳ್ಳಿ ಚಿತ್ರಗಳು ಕೈಯಲ್ಲಿವೆ. ಎರಡು-ಮೂರು ಪಾತ್ರಗಳು ಮನಸಿನಲ್ಲಿವೆ. ಅವು ನನಗೆ ದೊರೆಯುತ್ತವೆ ಎನ್ನುತ್ತಾರೆ ರಕ್ಷಿತಾ.

ನನ್ನ ಬದುಕು : ನಾನೇನು ಕನ್ನಡದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯಲ್ಲ. ಬ್ಯಾಂಕ್‌ ಖಾತೆಗಳನ್ನು ನಾನು ನಿಭಾಯಿಸುವುದಿಲ್ಲ. ಅಮ್ಮ-ನಾನು ಜಂಟಿ ಖಾತೆ ತೆರೆದಿದ್ದೇವೆ. ನಾನು ಹೆಚ್ಚು ದುಡ್ಡು ಖರ್ಚು ಮಾಡುವವಳೂ ಅಲ್ಲ. ಕಳೆದ ನಾಲ್ಕು ವರ್ಷಗಳಿಂದ ನನ್ನ ವೃತ್ತಿ ಜೀವನ ತೃಪ್ತಿಕರವಾಗಿಯೇ ಸಾಗುತ್ತಿದೆ ಎಂದು ರಕ್ಷಿತಾ ಆಕಾಶ ನೋಡಿದರು, ಅಲ್ಲಿಗೆ ಮಾತುಕತೆಗೆ ತೆರೆ ಬಿತ್ತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada