For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರ ಬಾಲಿವುಡ್‌ನಲ್ಲಿ ‘ಗುರು’ ಪ್ರಭಾವ!

  By Staff
  |

  ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಏಷ್ಯಾದ ಸೆಕ್ಸಿ ನಟ ಎನ್ನಲಾಗುವ ಅಭಿಷೇಕ್‌ ಬಚ್ಚನ್‌ ಅಭಿನಯದ, ಮಣಿರತ್ನಂ ನಿರ್ದೇಶನದ ‘ಗುರು’ ಚಿತ್ರ ಶುಕ್ರವಾರ(ಜ.11) ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ.

  ಈ ಹಿಂದೆ ಐಶ್‌-ಅಭಿಷೇಕ್‌ ನಟಿಸಿದ್ದ ‘ಢಾಯಿ ಅಕ್ಷರ್‌ ಪ್ರೇಮ್‌ ಕೆ’, ‘ಕುಚ್‌ ನಾ ಕಹೋ’, ‘ಉಮ್ರಾನ್‌ ಜಾನ್‌’ ಚಿತ್ರಗಳು ಬಾಕ್ಸಾಫೀಸಿನಲ್ಲಿ ತೋಪೆದ್ದು ಹೋಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ‘ಗುರು’ ಚಿತ್ರದ ಮೂಲಕ ಹೇಗಾದರೂ ಸ್ಟಾರ್‌ ಜೋಡಿ ಎನಿಸಿಕೊಳ್ಳುವ ತವಕದಲ್ಲಿದ್ದಾರೆ.

  ಇತ್ತೀಚೆಗೆ ಬಿಡುಗಡೆಯಾದ ‘ಧೂಮ್‌-2’ ಹಿಟ್‌ ಅದರೂ, ಅದರಲ್ಲಿ ಐಶ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದು ಹೃತಿಕ್‌ ರೋಷನ್‌. ಹೀಗಾಗಿ ಅಭಿಷೇಕ್‌ಗೆ ಬರಬೇಕಾಗಿದ್ದ ‘ಧೂಮ್‌-2’ ಚಿತ್ರದ ಎಲ್ಲಾ ಕ್ರೆಡಿಟ್‌ ಹೃತಿಕ್‌ ಪಡೆದುಕೊಂಡ ಎಂದು ಹೊಟ್ಟೆ ಉರಿದಿದ್ದಂತೂ ನಿಜ.

  ‘ಗುರು’ ಚಿತ್ರ ನೈಜ ಕಥೆಯ ಮೇಲೆ ಅಧಾರಿತವಾಗಿದ್ದು, ಅದರ ಹಿಂದೆ ಖ್ಯಾತ ನಿರ್ದೇಶಕ ಮಣಿರತ್ನಂ ಇರುವುದರಿಂದ ಚಿತ್ರ ಹಿಟ್‌ ಅಗೋದು ಖಂಡಿತಾ ಎಂದು ಇಬ್ಬರೂ ಎಲ್ಲೆಡೆ ಸಾರುತ್ತಿದ್ದಾರೆ. ಈ ಹಿಂದೆ, ಮಣಿರತ್ನಂ ಅವರ ‘ಯುವ’ ಚಿತ್ರದಲ್ಲಿ ಅಭಿಷೇಕ್‌, ‘ಇರುವರ್‌’ ನಲ್ಲಿ ಐಶ್‌ ಬೇಬಿ ಅಭಿನಯಿಸಿದ್ದರು.

  ‘ಗುರು’ ಚಿತ್ರದ ಕಥಾ ಸಾರಾಂಶ :

  ಗುಜರಾತಿನ ಇದಾರ್‌ ಎಂಬ ಸಣ್ಣ ಹಳ್ಳಿಯ ಯುವಕ ಗುರು. ಈತ ಹೇಗೆ ತನ್ನ ಸ್ವಂತ ಶ್ರಮದಿಂದ ಭಾರತದ ದೊಡ್ಡ ಉದ್ಯಮಿಯಾಗುತ್ತಾನೆ ಎಂಬುದು ಚಿತ್ರದಲ್ಲಿ ಬಿಂಬಿತವಾಗಿದೆ.

  ಮಿಥುನ್‌ ಚಕ್ರವರ್ತಿ, ಮಾಧವನ್‌ ಹಾಗೂ ವಿದ್ಯಾ ಬಾಲನ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರಕ್ಕೆ ಎ. ಅರ್‌ . ರೆಹಮಾನ್‌ ನೀಡಿರುವ ಸಂಗೀತಕ್ಕೆ, ಈಗಾಗಲೇ ಜನ ಮಾರುಹೋಗಿದ್ದಾರೆ. ಬಾಲಿವುಡ್‌ನ ಸೆಕ್ಸ್‌ ಬಾಂಬ್‌ ಮಲ್ಲಿಕಾ ಶೆರಾವತ್‌ ಐಟಂ ಸಾಂಗ್‌ ಕೂಡ ಜನರನ್ನು ತಣಿಸಲು ಕಾದಿದೆ.

  ಲಾಸ್ಟ್‌ ಬಟ್‌ ನಾಟ್‌ ದ ಲೀಸ್ಟ್‌ : ಐಟಂ ಸಾಂಗ್‌ನಲ್ಲಿ ಹಾಟ್‌ ಆಗಿ ಕಂಡಿರುವ ಸೆಕ್ಸಿ ಮಲ್ಲಿಕಾ ಶೇರಾವತ್‌ಗಿಂತ ಐಶು ಚಿಂದಿ ಝಕಾಸ್‌ ಕುಣಿದಿರುವ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆ. ಈ ಹಿಂದೆ ಐಶುಗೆ ಕುಣಿಯಲು ಬರುವುದೇ ಇಲ್ಲ ಎಂದು ಕಿಸ್ಸಮ್ಮ ರಾಖಿ ಸಾವಂತ್‌ ವೈಯ್ಯಾರದಿಂದ ಹೇಳಿದ್ದಳು. ಯಾರು ಮೇಲು ನೀವೇ ನಿರ್ಧರಿಸಿ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X