»   » ‘ದ್ವೀಪ’ಸುಂದರಿ ಸೌಂದರ್ಯ ಬಿಜೆಪಿಗೆ?

‘ದ್ವೀಪ’ಸುಂದರಿ ಸೌಂದರ್ಯ ಬಿಜೆಪಿಗೆ?

Subscribe to Filmibeat Kannada

(ಇಂಡಿಯಾಇನ್ಫೋ ಹೈದರಾಬಾದ್‌ ಪ್ರತಿನಿಧಿಯಿಂದ)

ದಕ್ಷಿಣಭಾರತದ ಖ್ಯಾತನಟಿ ಸೌಂದರ್ಯ ಬಿಜೆಪಿ ಸೇರುವರೇ ?

ಬಿಜೆಪಿ ಸೇರುವುದು ಮಾತ್ರವಲ್ಲ , ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುತ್ತವೆ ಹೈದರಾಬಾದ್‌ನಿಂದ ಬಂದಿರುವ ವರದಿಗಳು. ಆಂಧ್ರಪ್ರದೇಶದಲ್ಲಿ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು , ಸಿನಿಮಾಮಂದಿಯನ್ನು ಸೆಳೆಯಲು ವಿವಿಧ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ಕಸರತ್ತಿನ ಫಲವಾಗಿ ನಟಿ ಸೌಂದರ್ಯ ಬಿಜೆಪಿಯತ್ತ ವಾಲಿದ್ದಾರೆ ಎನ್ನುವುದು ಸುದ್ದಿ .

ಸೌಂದರ್ಯ , ನೀವು ಬಿಜೆಪಿ ಸೇರುತ್ತೀರಾ ?

ಎನ್ನುವ ಪ್ರಶ್ನೆಯನ್ನು ಮುಂದಿಟ್ಟ ಪ್ರತಿನಿಧಿಗೆ, ಸೌಂದರ್ಯ ನೀಡಿದ್ದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಹ ಉತ್ತರ.

ತತ್‌ಕ್ಷಣತಕ್ಕೆ ನಾನು ಬಿಜೆಪಿ ಸೇರುತ್ತಿಲ್ಲ . ಸದ್ಯಕ್ಕೆ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಒಂದು ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಆ ಕಾರಣದಿಂದಾಗಿ ತತ್‌ಕ್ಷಣದಲ್ಲಿ ಯಾವ ಪಾರ್ಟಿಯನ್ನೂ ನಾನು ಸೇರುತ್ತಿಲ್ಲ ಎಂದರು ಸೌಂದರ್ಯ. ಕೈಲಿರುವ ಸಿನಿಮಾ ಮುಗಿದ ನಂತರ ಸಕ್ರಿಯ ರಾಜಕಾರಣ ಪ್ರವೇಶಿಸುತ್ತೀರಾ ಅನ್ನುವ ಪ್ರಶ್ನೆಗೆ ಸೌಂದರ್ಯ ಸ್ಪಷ್ಟ ಉತ್ತರ ನೀಡಲಿಲ್ಲ .

ಅಂತಿಮವಾಗಿ ಸೌಂದರ್ಯ ಹೇಳಿದ್ದಿಷ್ಟು - ‘ಮುಂಬರುವ ದಿನಗಳಲ್ಲಿ ರಾಜಕೀಯ ಪ್ರವೇಶಿಸುವುದು ಖಚಿತ’.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada