»   » ‘ಗಂಡ ಹೆಂಡತಿ’ಯಲ್ಲಿ ರವಿ ಬೆಳಗೆರೆ, ‘ಲಂಚಸಾಮ್ರಾಜ್ಯ’ದಲ್ಲಿ ಕಾಕತ್ಕರ್‌!

‘ಗಂಡ ಹೆಂಡತಿ’ಯಲ್ಲಿ ರವಿ ಬೆಳಗೆರೆ, ‘ಲಂಚಸಾಮ್ರಾಜ್ಯ’ದಲ್ಲಿ ಕಾಕತ್ಕರ್‌!

Subscribe to Filmibeat Kannada


ಪತ್ರಿಕಾ ಮಾಧ್ಯಮದ ಇಬ್ಬರು ಸ್ನೇಹಿತರು ಕಿರುತೆರೆ ಪ್ರವೇಶಿಸಿ, ಅಲ್ಲಿಂದ ಹಿರಿತೆರೆಯಲ್ಲಿ ಮಿಂಚಲು ಹೊರಟಿದ್ದಾರೆ. ಈ ಚಿತ್ರಗಳ ಬಗ್ಗೆ ಗಾಂಧಿನಗರದಲ್ಲಿ ಸಹಜ ಕುತೂಹಲ ಕಂಡುಬಂದಿದೆ.

ಉದಯ ಮತ್ತು ಈಟಿವಿಯಲ್ಲಿ ರಾತ್ರಿ 10ಗಂಟೆಗೆ ಕ್ರೆೃಂ ಸೀರಿಯಲ್‌ಗಳು ಶುರುವಾಗುತ್ತವೆ. ಕ್ರೆೃಂ ಡೈರಿಗೆ ಹಾಯ್‌ಬೆಂಗಳೂರ್‌ನ ರವಿಬೆಳಗೆರೆ, ಕ್ರೆೃ ಸ್ಟೋರಿಗೆ ಬಾಲಕೃಷ್ಣ ಕಾಕತ್ಕರ್‌ ಸಾರಥ್ಯವಹಿಸಿದ್ದಾರೆ. ಪೈಪೋಟಿಗೆ ಬಿದ್ದವರಂತೆ ಈ ಸ್ನೇಹಿತರು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಎರಡೂ ಕಾರ್ಯಕ್ರಮಗಳು ಇಷ್ಟವಾಗಿವೆ.

ಟಿ.ಎನ್‌.ಸೀತಾರಾಂ ಅವರ ‘ಮುಕ್ತ’ ಸೀರಿಯಲ್‌ನಲ್ಲಿ ನ್ಯಾಯಾಧೀಶರ ಪಾತ್ರ ಮಾಡುವ ಮೂಲಕ ಮನೆಮಾತಾದ ರವಿಬೆಳಗೆರೆ, ಶೈಲೇಂದ್ರಬಾಬು ನಿರ್ಮಾಣದ ‘ಗಂಡ ಹೆಂಡತಿ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಉಡೀಸ್‌’ ಮತ್ತು ‘ಓಂಕಾರ’ ಚಿತ್ರಗಳಿಗೆ ಈ ಹಿಂದೆ ಧ್ವನಿ ನೀಡಿದ್ದ ಬಾಲಕೃಷ್ಣ ಕಾಕತ್ಕರ್‌, ‘ಲಂಚ ಸಾಮ್ರಾಜ್ಯ’ ಚಿತ್ರದಲ್ಲಿ ವಕೀಲನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ವೆಂಕಟಾಚಲ ಕ್ಲಾಪ್‌ ಮಾಡಿ ಈ ಚಿತ್ರಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ನಿರ್ದೇಶಕರು ಬೂದಾಳ್‌ ಕೃಷ್ಣಮೂರ್ತಿ. ಮಾಸ್ಟರ್‌ ಹಿರಣ್ಣಯ್ಯ, ಸಿ.ಆರ್‌.ಸಿಂಹ, ಉಮಾಶ್ರೀ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬೆಳಗೆರೆ ಮತ್ತು ಕಾಕತ್ಕರ್‌ ಎಂಬ ‘ಕ್ರೆೃಂ’ ಮಿತ್ರರಿಬ್ಬರ ಚಿತ್ರಬದುಕು ಜಾಸ್ತಿ ಚೆನ್ನಾಗಿರಲಿ ಎಂದರೆ, ಮಾಧ್ಯಮಕ್ಕೆ ನಷ್ಟವಾಗುತ್ತದೆ. ಹೀಗಾಗಿ ತುಸು ಚೆನ್ನಾಗಿರಲಿ ಎಂದು ಹಾರೈಸೋಣವೇ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada