»   » ಈ ಯಮ್ಮನಿಗೆ ವಯಸ್ಸಾಯ್ತು ಅಂತ ಬೆಟ್ಟು ತೋರಿದವರ ಬೆರಳನ್ನು ಮಡಿಸಿ, ತುಂಡುಡುಗೆ ತೊಟ್ಟು ಬಿಂದಾಸ್‌ ಕುಣಿಯುವ ರಮ್ಯ ಕೃಷ್ಣ ತಮ್ಮ ತೂಕವನ್ನು ಸಾಕಷ್ಟು ಇಳಿಸಿಕೊಂಡಿದ್ದಾರೆ.

ಈ ಯಮ್ಮನಿಗೆ ವಯಸ್ಸಾಯ್ತು ಅಂತ ಬೆಟ್ಟು ತೋರಿದವರ ಬೆರಳನ್ನು ಮಡಿಸಿ, ತುಂಡುಡುಗೆ ತೊಟ್ಟು ಬಿಂದಾಸ್‌ ಕುಣಿಯುವ ರಮ್ಯ ಕೃಷ್ಣ ತಮ್ಮ ತೂಕವನ್ನು ಸಾಕಷ್ಟು ಇಳಿಸಿಕೊಂಡಿದ್ದಾರೆ.

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ಮಸ್ತ್‌ ಮಸ್ತ್‌ ಹುಡುಗಿ  --> ಲೇಖನಮಾರ್ಚ್‌ 11, 2003ರಜನಿಕಾಂತ್‌ ಮುಂದೆ ಕೂದಲಿಗೆ ಬಿಳಿ ಬಣ್ಣ ಬಳಿದುಕೊಂಡು ಈಕೆ ನಿಂತ ನಂತರ, ರಮ್ಯ ಇನ್ನು ಮುಂದೆ ಅಜ್ಜಿ ಪಾತ್ರಗಳಿಗೇ ತೃಪ್ತಿ ಪಟ್ಟುಕೊಳ್ಳಬೇಕೋ ಏನೋ ಎಂದು ಲೇವಡಿ ಮಾಡಿದವರಿಗೆ ರಮ್ಯ ತಮ್ಮ ನೃತ್ಯ ಹಾಗೂ ತುಂಡುಡುಗೆಗಳ ಮೂಲಕವೇ ಉತ್ತರ ಕೊಡುತ್ತಿದ್ದಾರೆ.

‘ಜ್ಯೂಲಿ ಗಣಪತಿ’ ಎಂಬ ತೆಲುಗು ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ಮಿಂಚಿದ ರಮ್ಯ ‘ವರ್ಣಂ’ ಎಂಬ ಚಿತ್ರದಲ್ಲಿ ಕುಣಿಯುತ್ತಿರುವ ಪರಿ ನೋಡಿದರೆ ಹೊಸ ಹುಡುಗಿಯರೂ ಬೆಚ್ಚಬೇಕು. ಹೊಸಬರು ಬರ್ತಾರೆ, ಹೋಗ್ತಾರೆ. ಹಾಗೆ ಬಂದು ಹೋದವರೆಷ್ಟೋ. ನಾನು ಈಗ 8 ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ. ಗ್ಲ್ಯಾಮರ್‌ ಪಾತ್ರಗಳಿಗೆ ಬರೀ ತುಂಡು ಬಟ್ಟೆ ಹಾಕಿ ನಿಂತರೆ ಸಾಲದು. ಅದಕ್ಕೆ ತಕ್ಕಂಥ ಚಹರೆ ಇರಬೇಕು. ಮೇಲಾಗಿ ನಗು ಹಾಗೂ ನೋಟದಿಂದಲೇ ಸೌಂದರ್ಯದ ಪೂರ್ಣ ಪರಿಚಯ ಆಗೋದು. ನನ್ನಲ್ಲಿ ಆ ನಗು ಹಾಗೂ ನೋಟ ಇನ್ನೂ ಮಾಸಿಲ್ಲ. ನನ್ನಷ್ಟು ದೀರ್ಘ ಕಾಲ ಗ್ಲ್ಯಾಮರ್‌ ಪಾತ್ರಗಳಲ್ಲಿ ಮೆರೆದ ಬೇರೊಬ್ಬ ನಟಿಯ ಹೆಸರು ನೋಡಿ ಹೇಳೋಣ ಎಂದು ರಮ್ಯ ಹುಬ್ಬು ಕುಣಿಸುತ್ತಾರೆ.

ಅಂದಹಾಗೆ, ಮೀಸೆ ಖ್ಯಾತಿಯ ನಾಯಕನಿಗೆ ರಮ್ಯಕೃಷ್ಣ ನಾಯಕಿಯಾಗಿ ನಟಿಸಿದ ಕನ್ನಡ ಚಿತ್ರ ‘ರಾಜಾ ನರಸಿಂಹ’ ಮಾರ್ಚ್‌ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ.

Post your views

ಪೂರಕ ಓದಿಗೆ-
‘ಐರನ್‌ ಲೆಗ್‌’ ರಮ್ಯ!
ಸರಳ ಸ್ನಿಗ್ಧ ಸುಂದರಿ ರಮ್ಯಕೃಷ್ಣ

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...