»   » ಐಟಂ ಗರ್ಲ್‌ ರಾಖಿ ಸಾವಂತ್‌ಗೆ ಅವು ಅಸಹ್ಯಕರ, ಆದರೆ?

ಐಟಂ ಗರ್ಲ್‌ ರಾಖಿ ಸಾವಂತ್‌ಗೆ ಅವು ಅಸಹ್ಯಕರ, ಆದರೆ?

Subscribe to Filmibeat Kannada


ಮುಂಬಯಿ : ಅಸಭ್ಯ ಮತ್ತು ಬೆದರಿಕೆ ಕರೆಗಳು ತಮ್ಮ ಮೊಬೈಲ್‌ಗೆ ಬರುತ್ತಿವೆ ಎಂಬ ಸಂಗತಿಯನ್ನು ಐಟಂ ಗರ್ಲ್‌ ರಾಖಿ ಸಾವಂತ್‌, ಸುದ್ದಿಗಾರರಿಗೆ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಕೆಲವು ಓದಲಾಗದಷ್ಟು ಅಸಭ್ಯವಾದ ಎಸ್‌ಎಂಎಸ್‌ಗಳು, ಕೆಲವು ಬೆದರಿಕೆ ಕರೆಗಳು ಬರುತ್ತಿವೆ. ಇವುಗಳನ್ನು ಯಾರು ಮತ್ತು ಏಕೆ ಕಳುಹಿಸುತ್ತಿದ್ದಾರೆ ಎಂಬ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ. ಈ ಎಸ್‌ಎಂಎಸ್‌ಗಳ ಬಗ್ಗೆ, ನನ್ನ ಕುಟುಂಬದವರು ಚಿಂತೆಗೆ ಸಿಲುಕಿದ್ದಾರೆ ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

ಆದರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ಯಾಕೆಂದರೆ ಕಾರ್ಯದೊತ್ತಡದಲ್ಲಿ, ಇದಕ್ಕೆಲ್ಲ ನನಗೆ ಬಿಡುವಿಲ್ಲ ಎನ್ನುವ ರಾಖಿ ಸಾವಂತ್‌, ದಿನಕ್ಕೆ 50ಎಸ್‌ಎಂಎಸ್‌ಗಳ ಸ್ವೀಕರಿಸುತ್ತಿರುವುದಾಗಿ ತಿಳಿಸಿದ್ದಾರೆ.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada