»   » ಕನ್ನಡ ಸಿನಿಮಾ ಕಲಾವಿದರ ಸಂಘಕ್ಕೆ ರವಿಚಂದ್ರನ್‌ ಸಾರಥ್ಯ...?

ಕನ್ನಡ ಸಿನಿಮಾ ಕಲಾವಿದರ ಸಂಘಕ್ಕೆ ರವಿಚಂದ್ರನ್‌ ಸಾರಥ್ಯ...?

Posted By:
Subscribe to Filmibeat Kannada


ಮೆಗಾ ಸಿನಿಮಾ ಮೂಲಕ ದಾಖಲೆ ಬರೆಯಲು ಹೊರಟಿರುವ ನಟ ರವಿಚಂದ್ರನ್‌, ಕನ್ನಡ ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಸದ್ಯದ ಬೆಳವಣಿಗೆಗಳು ಈ ಅಂಶವನ್ನು ಖಚಿತಪಡಿಸಿವೆ.

ಸಂಘದ ಹಾಲಿ ಅಧ್ಯಕ್ಷ ಅಂಬರೀಷ್‌ ಅವರ ಅಧಿಕಾರವಧಿ ಮುಕ್ತಾಯದ ಹಂತ ತಲುಪಿದ್ದು, ಏ.8ರಂದು ಕಲಾವಿದರ ಸಂಘದ ಚುನಾವಣೆ ನಡೆಯಲಿದೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ರವಿಚಂದ್ರನ್‌ ಹೆಸರು ಬಹುತೇಕ ಕಲಾವಿದರಿಂದ ಕೇಳಿಬರುತ್ತಿದೆ.

ಕನ್ನಡ ಚಿತ್ರೋದ್ಯಮದ ಬಗ್ಗೆ ರವಿಚಂದ್ರನ್‌ ಗಂಭೀರವಾಗಿ ತಲೆಕೆಡಿಸಿಕೊಂಡಿರುವುದು, ಅಲ್ಲದೇ ಅವರ ಆಲೋಚನೆಗಳು ಕಲಾವಿದರನ್ನು ಆಕರ್ಷಿಸಿವೆ.

ಈ ಮಧ್ಯೆ ತಮ್ಮ ಮೆಗಾ ಸಿನಿಮಾ ಬಗ್ಗೆ ಚರ್ಚಿಸಲು, ನಗರದ ಹೋಟೆಲ್‌ವೊಂದರಲ್ಲಿ ಕಲಾವಿದರ ಸಭೆ ಶನಿವಾರ ರಾತ್ರಿ ನಡೆದಿದೆ. ಮಾ.25ರಂದು ಉಪ್ಪಿ ರೆಸಾರ್ಟ್‌ನಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಅಲ್ಲಿ ಮೆಗಾ ಸಿನಿಮಾಗೆ ಅಂತಿಮ ರೂಪ ಸಿಗುವ ಸಾಧ್ಯತೆಗಳಿವೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada