»   » ಅಣ್ಣಾವ್ರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ

ಅಣ್ಣಾವ್ರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ

Posted By:
Subscribe to Filmibeat Kannada

ಯಾವುದೇ ತೊಂದರೆಯಿಲ್ಲದೆ ನಡೆದಾಡುತ್ತಿರುವ ವರನಟ ರಾಜ್‌ಕುಮಾರ್‌, ಚೆನ್ನೈನ ಆಸ್ಪತ್ರೆಯಿಂದ ಶನಿವಾರ ಸಂಜೆ ಡಿಸ್ಚಾರ್ಜ್‌ ಆಗಿ ಬೆಂಗಳೂರಿನ ಸದಾಶಿವನಗರದ ಮನೆ ಸೇರಲಿದ್ದಾರೆ.

ಅಣ್ಣಾವ್ರಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾ.ಪಿ.ವಿ.ಎ. ಮೋಹನದಾಸ್‌ ಈ ವಿಷಯವನ್ನು ಸುದ್ದಿಗಾರರಿಗೆ ಸ್ಪಷ್ಟೀಕರಿಸಿದರು. ಪೃಷ್ಠದ ಕೆಳಗಿನ ಮೂಳೆ ಹಾಗೂ ಮಂಡಿ ನೋವಿನಿಂದ ಈಗ ರಾಜ್‌ಕುಮಾರ್‌ ಸಂಪೂರ್ಣ ಗುಣಮುಖರಾಗಿದ್ದಾರೆ. ಮತ್ತೆ ಅವರಿಗೆ ಬಾಧೆ ಬರಲಾರದು. ಯಾವುದೇ ಕಷ್ಟವಿಲ್ಲದೆ, ಆಧಾರಕ್ಕೆ ಏನನ್ನೂ ಹಿಡಿಯದೆ ಸಲೀಸಾಗಿ ಅವರು ನಡೆದಾಡುತ್ತಿದ್ದಾರೆ. ಏಪ್ರಿಲ್‌ 12ನೇ ತಾರೀಕು ಅವರನ್ನು ಡಿಸ್ಚಾರ್ಜ್‌ ಮಾಡುತ್ತೇವೆ ಎಂದು ಮೋಹನ್‌ದಾಸ್‌ ಹೇಳಿದರು.

ಶನಿವಾರ ಸಂಜೆ ವಿಮಾನದಲ್ಲಿ ರಾಜ್‌ಕುಮಾರ್‌ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

(ಇನ್ಫೋ ವಾರ್ತೆ)

ಆಸ್ಪತ್ರೆಯಲ್ಲಿ ಅಣ್ಣಾವ್ರು

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada