»   » ಶಿಕಾರಿಪುರದಲ್ಲಿ ಪುಟ್ಟಣ್ಣ ಕಣಗಾಲ್‌ ಚಿತ್ರೋತ್ಸವ

ಶಿಕಾರಿಪುರದಲ್ಲಿ ಪುಟ್ಟಣ್ಣ ಕಣಗಾಲ್‌ ಚಿತ್ರೋತ್ಸವ

Subscribe to Filmibeat Kannada

ಶಿವಮೊಗ್ಗ : ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಏಕೈಕ ಸ್ಟಾರ್‌ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳ ಉತ್ಸವ ಶಿಕಾರಿಪುರದಲ್ಲಿ ಜೂನ್‌ 5 ರಿಂದ ನಡೆಯಲಿದೆ.

ಶಿಕಾರಿಪುರ ತಾಲ್ಲೂಕಿನ ಕಾಗಿನೆಲ್ಲಿಯಲ್ಲಿರುವ ಪುಟ್ಟಣ್ಣ ಕಣಗಾಲ್‌ ಕಲಾಕ್ಷೇತ್ರಕ್ಕೆ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

ಸಿನಿಮಾ ಉತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪುಟ್ಟಣ್ಣನವರನ್ನು ಜನತೆ ಮತ್ತೊಮ್ಮೆ ನೆನಪಿಸಿಕೊಳ್ಳಲು ಈ ಉತ್ಸವ ಅವಕಾಶ ಕಲ್ಪಿಸಲಿದೆ ಎಂದು ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಡಿ. ಬಿ.ಬಸವೇಗೌಡ ತಿಳಿಸಿದ್ದಾರೆ.

ಚಿತ್ರೋತ್ಸವದ ಅಂಗವಾಗಿ ಕಾಗಿನೆಲ್ಲಿಯ ಚಿತ್ರಾಭಿಮಾನಿಗಳು ಪ್ರಣಯರಾಜ ಶ್ರೀನಾಥ್‌ರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸುವರು. ಸಚಿವ ಕಾಗೋಡು ತಿಮ್ಮಪ್ಪ ಬೆಳ್ಳಿ ಹಬ್ಬ ಉತ್ಸವದ ಅಧ್ಯಕ್ಷತೆಯನ್ನು ವಹಿಸುವರು.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada