»   » ಯುಗಾದಿಯಂದು ಲಗಾನ್‌ನ ‘ಭುವನ’ ಅಮೀರ್‌ ಖಾನ್‌ ಬೆಂಗಳೂರಿಗೆ

ಯುಗಾದಿಯಂದು ಲಗಾನ್‌ನ ‘ಭುವನ’ ಅಮೀರ್‌ ಖಾನ್‌ ಬೆಂಗಳೂರಿಗೆ

Posted By: Staff
Subscribe to Filmibeat Kannada

ಆಸ್ಕರ್‌ ಪ್ರಶಸ್ತಿ ಗೆಲ್ಲದಿದ್ದರೇನು? ಅಮೀರ್‌ ಖಾನ್‌ ಲಗಾನ್‌ ಗುಂಗಿನಿಂದ ಇನ್ನೂ ಪೂರ್ತಿ ಹೊರಬಂದಿಲ್ಲ. ಎಲ್ಲಿ ಹೋದರೂ ಲಗಾನ್‌ ಚಿತ್ರದ್ದೇ ಮಾತು. ಅಮೀರ್‌ ಅಷ್ಟೇ ಏನು- ಲಕ್ಷ ಲಕ್ಷ ಭಾರತೀಯರದು ಲಗಾನ್‌ದೇ ಜಪ. ಆಸ್ಕರ್‌ ಪೀಠ ಏರದಿದ್ದರೂ, ಲಗಾನ್‌ಗೆ- ಅದರ ಮೂಲಕ ಅಮೀರ್‌ಗೆ ಅಭಿಮಾನಿಗಳ ಎದೆಯಲ್ಲಿ ಭದ್ರ ಸ್ಥಾನ.
- ಈ ಪರಿಯ 'ಭುವನ" ದ ಭಾಗ್ಯ ಅಮೀರ್‌ಖಾನ್‌ ಯುಗಾದಿಯಂದು ಬೆಂಗಳೂರಿಗೆ ಬರುತ್ತಿದ್ದಾರೆ. ಅವರೇನೂ ಚಿತ್ರಭಾನು ಸಂವತ್ಸರಕ್ಕೆ ಸ್ವಾಗತ ಕೋರಲು ಸಿಲಿಕಾನ್‌ ನಗರಿಗೆ ಆಗಮಿಸುತ್ತಿಲ್ಲ ; ಲಗಾನ್‌ ಹುಟ್ಟಿದ್ದು ಹೇಗೆ? ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡುವುದು ಅವರ ಕಾರ್ಯಕ್ರಮ.

ಅಮೀರ್‌ಖಾನ್‌ ಬೆಂಗಳೂರು ಭೇಟಿಯ ಕಾರ್ಯಕ್ರಮ ಇಂತಿದೆ : ಶನಿವಾರ ಸಂಜೆ ಅಗಮನ. ಲೀಲಾ ಪ್ಯಾಲೇಸ್‌ನಲ್ಲಿ ಠಿಕಾಣಿ. ಭಾನುವಾರ ಲಗಾನ್‌ ನಿರ್ಮಾಣ ಕುರಿತಾದ ಪುಸ್ತಕದ ಬಿಡುಗಡೆ. ಅಂದಹಾಗೆ, ಕಳೆದ ಸಲ ಅಮೀರ್‌ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾಗ- ಇಂಗ್ಲೆಂಡ್‌ ಪ್ರಧಾನಿ ಟೋನಿ ಬ್ಲೇರ್‌ ಕೂಡ ಬೆಂಗಳೂರಿನಲ್ಲಿದ್ದರು. ಇಬ್ಬರೂ ಭೇಟಿಯಾಗಿದ್ದರೆನ್ನಿ . ಈ ಭಾರಿಯ ಅಮೀರ್‌ ಭೇಟಿಯ ಸಂದರ್ಭದಲ್ಲೇ ಪಾಶ್ಚಾತ್ಯ ಸಂಗೀತ ಲೋಕದ ಪ್ರಸಿದ್ಧ ರೋಜರ್‌ ವಾಟರ್ಸ್‌ನ ಪ್ರದರ್ಶನ ಬೆಂಗಳೂರಲ್ಲಿ ಏರ್ಪಾಟಾಗಿದೆ.

ವಾಸ್ತವವಾಗಿ ಫೆಬ್ರವರಿಯಲ್ಲೇ ಲಗಾನ್‌ ಪುಸ್ತಕ ಸಿದ್ಧವಾಗಿತ್ತು . 41 ಪುಟಗಳ ಈ ಪುಟ್ಟ ಪುಸ್ತಕವನ್ನು ಅಮೀರ್‌ ಹಾಗೂ ಆಶುತೋಷ್‌ ಗೌರೀಕರ್‌ ರೂಪಿಸಿದ್ದಾರೆ. ಭಾರತದ ಮಟ್ಟಿಗಂತೂ ಈ ಪರಿಯ ಪುಸ್ತಕ ಅಪರೂಪದ್ದು. ಅಲ್ಲಿಗೆ ಲಗಾನ್‌ ತಂಡದ ಹೆಸರಿನಲ್ಲಿ ಇನ್ನೊಂದು ದಾಖಲೆ!
(ಇನ್ಫೋ ವಾರ್ತೆ)

English summary
Aamir Khan to visit Bangalore on April 13th to here Roger Waters music

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada