»   » ಮೂವರು ನಿರ್ದೇಶಕರಿಗೆ ಅರ್ಧಚಂದ್ರ!

ಮೂವರು ನಿರ್ದೇಶಕರಿಗೆ ಅರ್ಧಚಂದ್ರ!

Posted By: Staff
Subscribe to Filmibeat Kannada
Kodlu Ramakrishna
ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ನಡೆಸುತ್ತಿರುವ ನಿರ್ದೇಶನಾ ತರಬೇತಿ ಶಿಬಿರದಂತೆ, ಪರ್ಯಾಯ ತರಬೇತಿ ಶಾಲೆಯನ್ನು ತೆರೆದ ಹಿನ್ನೆಲೆಯಲ್ಲಿ ನಿರ್ದೇಶಕರ ಸಂಘದಿಂದ ಮೂವರನ್ನು ಉಚ್ಛಾಟಿಸಲಾಗಿದೆ. ಸಂಘದ ಉಪಾಧ್ಯಕ್ಷ ಕೋಡ್ಲು ರಾಮಕೃಷ್ಣ, ಪದಾಧಿಕಾರಿಗಳಾದ ಆನಂದ್‌ ಪಿ. ರಾಜು ಮತ್ತು ಬಿ. ರಾಮಮೂರ್ತಿ ಅವರನ್ನು ಸಂಘದಿಂದ ತೆಗೆದು ಹಾಕಲಾಗಿದೆ.

ನಿರ್ದೇಶಕರ ಸಂಘವು ಫಿಲಂ ಇನ್‌ಸ್ಟಿಟ್ಯೂಟ್‌ ಮಾದರಿಯ ತರಬೇತಿ ಶಿಬಿರಗಳನ್ನು ಕಳೆದ ಎರಡು ವರ್ಷಗಳಿಂದ ನಡೆಸುತ್ತಿದೆ. ಈಗಾಗಲೇ 5 ತಂಡಗಳು ತರಬೇತಿಯನ್ನು ಹೊಂದಿದ್ದು ಈ ಶಿಬಿರದಲ್ಲಿ ಉತ್ತೀರ್ಣರಾದ 80 ವಿದ್ಯಾರ್ಥಿ ಗಳು ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ಸಂಘದ ಕಣ್ಣು ತಪ್ಪಿಸಿ ಉಚ್ಛಾಟಿತ ಮೂರೂ ನಿರ್ದೇಶಕರುಗಳು ತಮ್ಮದೇ ತರಬೇತು ಶಾಲೆಯನ್ನು ನಡೆಸುತ್ತಿದ್ದರು. ಇನ್ನಿತರ ತರಬೇತಿ ಶಾಲೆಗಳು ಸರಿಯಿಲ್ಲ ಎಂಬ ಆರೋಪವನ್ನೂ ಹೊರಿಸಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ಮೂವರಿಂದಲೂ ಸ್ಪಷ್ಟ ಉತ್ತರ ಬರಲಿಲ್ಲ. ರಾಜೀನಾಮೆ ನೀಡಲು ಒತ್ತಾಯಿಸಿದರೂ ಅವರುಗಳು ಸರಿಯಾದ ಪ್ರತಿಕ್ರಿಯೆ ತೋರಿಸದ ಕಾರಣ ಕೋಡ್ಲು ರಾಮಕೃಷ್ಣ, ಆನಂದ್‌ ಪಿ. ರಾಜು ಮತ್ತು ರಾಮಮೂರ್ತಿಯವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಚಲನಚಿತ್ರ ನಿರ್ದೇಶಕರ ಸಂಘದ ಪ್ರಕಟಣೆ ಹೇಳಿದೆ.

ನಮ್ದೇನೂ ತಪ್ಪಿಲ್ಲ..
ನಾವು ತರಬೇತಿ ಶಾಲೆಯನ್ನು ನಡೆಸುತ್ತಿರುವ ವಿಷಯವನ್ನು ಈಗಾಗಲೇ ಸಂಘದ ಗಮನಕ್ಕೆ ತಂದಿದ್ದೇವೆ. ಇದರಲ್ಲಿ ನಮ್ಮ ತಪ್ಪು ಏನೂ ಇಲ್ಲ ಎಂಬುದು ಉಚ್ಛಾಟಿತ ನಿರ್ದೇಶಕರುಗಳ ಅಭಿಪ್ರಾಯವಾಗಿದೆ. ಮತ್ತೊಮ್ಮೆ ಸಂಘದ ಕಾರ್ಯದರ್ಶಿಗಳ ಜೊತೆ ಸಮಾಲೋಚನೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಕೋಡ್ಲು ರಾಮಕೃಷ್ಣ ತಿಳಿಸಿದ್ದಾರೆ.

English summary
Kodlu Ramakrishna, Anand P. Raju and B. Ramamurthy expelled from Karnataka film directors association
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada