»   » ಅಣ್ಣಾವ್ರ ಸಿನಿಮಾ ವಿಚಾರಸಂಕಿರಣ

ಅಣ್ಣಾವ್ರ ಸಿನಿಮಾ ವಿಚಾರಸಂಕಿರಣ

Posted By:
Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ಪದ್ಮಭೂಷಣ, ನಟಸಾರ್ವಭೌಮ, ವರನಟ ಡಾ. ರಾಜ್‌ಕುಮಾರ್‌ ಈವರೆಗೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ 5 ದಶಕಗಳನ್ನೇ ಕಳೆದಿದ್ದಾರೆ. ಹೀಗಿದ್ದೂ ಈವರೆಗೆ ಡಾ. ರಾಜ್‌ರಂತಹ ಮೇರುನಟರ ಸಿನಿಮಾ ಕುರಿತು ಮೌಲ್ಯಮಾಪನ ಮಾಡುವ ಯಾವುದೇ ಕಸರತ್ತುಗಳು ನಡೆದಿಲ್ಲ ಎಂದರೂ ತಪ್ಪಾಗಲಾರದು. ಈ ಕೊರತೆಯನ್ನು ತುಂಬಲೋ ಎಂಬಂತೆ, ಜೂನ್‌ 20 ರಿಂದ ಬೆಂಗಳೂರಿನ ಕನ್ನಡ ಭವನದಲ್ಲಿ ‘ ಡಾ. ರಾಜ್‌ಕುಮಾರ್‌, ಚಿತ್ರರಂಗದ ಅರ್ಧ ಶತಮಾನ-ವೈಚಾರಿಕ ನೋಟ’ ಕುರಿತಾದ ವಿಚಾರ ಸಂಕಿರಣ ನಡೆಯಲಿದೆ.

ರಾಜ್‌ ವಿಚಾರ ಸಂಕಿರಣದ ಜೊತೆ ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಕನ್ನಡ ಜನಶಕ್ತಿಯ ಆಶ್ರಯದಲ್ಲಿ ನಡೆಸಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎಸ್‌. ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಪಿಇಎಸ್‌ ಶಿಕ್ಷಣ ಸಂಸ್ಥೆಯ ಪ್ರೊ. ದೊರೆಸ್ವಾಮಿ ಅವರು ಆಗಮಿಸಲಿದ್ದಾರೆಂದು ಕನ್ನಡ ಜನ ಶಕ್ತಿ ಸಂಘದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಪ್ರಮುಖವಾಗಿ- ಸಾಹಿತಿಗಳಾದ ಕೆ. ಎಸ್‌. ನಿಸಾರ್‌ ಅಹಮದ್‌, ಪ್ರೊ. ದೊಡ್ಡರಂಗೇಗೌಡ, ನಟ ಜಿ.ಕೆ. ಗೋವಿಂದರಾವ್‌, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್‌, ಕೆ.ಎಸ್‌.ಎಲ್‌. ಸ್ವಾಮಿ ಮೊದಲಾದವರು ಭಾಗವಹಿಸಲಿದ್ದಾರೆ.

ಸಾ.ರಾ. ಗೋವಿಂದು ಅವರ ‘ತನು ಚಿತ್ರ ಸಂಸ್ಥೆಯು’ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಲಾಗಿದೆ. ಹಿರಿಯ ಕಲಾವಿದರಾದ ಶಾಂತಮ್ಮ, ಬಿ.ಜಯಾ, ಸದಾಶಿವ ಬ್ರಹ್ಮಾವರ್‌, ಶನಿಮಹಾದೇವಪ್ಪ ಮೊದಲಾದವರನ್ನು ಸನ್ಮಾನಿಸಲಾಗುತ್ತಿದೆ ಎಂದು ರಾಮೇಗೌಡ ಅವರು ತಿಳಿಸಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada