»   » ಮದ್ವೆಯಾದ ಮೇಲೆ ಐಶ್ವರ್ಯ ಬಚ್ಚನ್‌ ಏನ್‌ ಮಾಡ್ತೀದ್ದಾರೆ?

ಮದ್ವೆಯಾದ ಮೇಲೆ ಐಶ್ವರ್ಯ ಬಚ್ಚನ್‌ ಏನ್‌ ಮಾಡ್ತೀದ್ದಾರೆ?

Subscribe to Filmibeat Kannada


ಐಶ್‌ ಬೇಬಿ ಎಂದು ಮುದ್ದಿನಿಂದ ಕರೆಸಿಕೊಂಡ ಐಶ್ವರ್ಯ ರೈ ಅವರ ಹೆಸರು ಈಗ ಬದಲಾಗಿದೆ! ಅವರು ತಮ್ಮನ್ನು ತಾವು ಐಶ್ವರ್ಯ ಬಚ್ಚನ್‌ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಪರಿಚಯ ಮಾಡಿಕೊಂಡಿದ್ದಾರೆ.

ಅಂದ ಹಾಗೇ, ಮದ್ವೆಯಾದ ಮೇಲೆ ಐಶ್ವರ್ಯ ರೈ ಸಕತ್ತು ಖುಷಿಯಲ್ಲಿದ್ದಾರೆ. ಮತ್ತೆ ಬಣ್ಣ ಹಚ್ಚುವ ಹಂಬವಿದ್ದರೂ, ಸದ್ಯಕ್ಕೆ ಅವರಿಗೆ ಪುರುಸೊತ್ತಿಲ್ಲ! ಮದುವೆ, ಮಧುಚಂದ್ರದ ಭರಟೆಗಳು ಈಗ ಮುಗಿದಿದ್ದು, ಅವರು ಪ್ರಸ್ತುತ ವಿಶ್ವ ಸುತ್ತುವ ಕನಸು ಕಾಣುತ್ತಿದ್ದಾರೆ.

‘ಮರೆಯಲಾಗದ ಪ್ರವಾಸ’ ಎಂಬ ಕಾರ್ಯಕ್ರಮ ಅವರ ಮುಂದಿದೆ. ಈ ಬಗ್ಗೆ ಸುದ್ದಿಗಾರರಿಗೆ ಐಶ್ವರ್ಯ ವಿವರ ನೀಡಿದರು.

2008ರ ಏಪ್ರಿಲ್‌ನಲ್ಲಿ ಈ ಪ್ರಪಂಚ ಸುತ್ತುವ ಪ್ರವಾಸ ಆರಂಭಗೊಳ್ಳಲಿದ್ದು, ಐಶ್ವರ್ಯ ಮಾವ ಅಮಿತಾಭ್‌ ಬಚ್ಚನ್‌ ಪ್ರವಾಸದ ಸಾರಥ್ಯವಹಿಸಲಿದ್ದಾರೆ. ಅಭಿಷೇಕ್‌ ಬಚ್ಚನ್‌, ಲಾರಾ ದತ್ತ, ಬಿಪಾಶಾ ಬಸು ಮತ್ತು ರಿತೇಶ್‌ ದೇಶ್‌ಮುಖ್‌ ಮತ್ತಿತರರು ಪ್ರವಾಸದಲ್ಲಿ ಜೊತೆ ಇರಲಿದ್ದಾರೆ.

ಅಂದ ಹಾಗೇ, ಐಶ್ವರ್ಯ ಖುಷಿಗೆ ಇನ್ನೊಂದು ಕಾರಣವೂ ಇದೆ. ಅಂತರ್ಜಾಲದಲ್ಲಿ ಅತಿ ಹೆಚ್ಚು ಬಳಕೆಯಾದ ಕೀವರ್ಡ್‌ ‘ಐಶ್ವರ್ಯ ರೈ’ ಅಂತೆ. ಹೀಗಾಗಿ ಎಂಎಸ್‌ಎನ್‌ ಸರ್ಚ್‌ ಇಂಜಿನ್‌ ಐಶ್ವರ್ಯರನ್ನು ಸನ್ಮಾನಿಸಿದೆ.

Please Wait while comments are loading...