»   » ಸೈನಿಕ ನನ್ನ ಮಹತ್ವಾಕಾಂಕ್ಷೆಯ ಚಿತ್ರ

ಸೈನಿಕ ನನ್ನ ಮಹತ್ವಾಕಾಂಕ್ಷೆಯ ಚಿತ್ರ

Posted By: Staff
Subscribe to Filmibeat Kannada

'ಸೈನಿಕ" ಸೋತರೆ ನನ್ನನ್ನು ನಾನು ರಾಷ್ಟ್ರದ್ರೋಹಿ ಎಂದು ಘೋಷಿಸಿಕೊಳ್ಳುತ್ತೇನೆ!" ಹಾಗೆನ್ನುವಾಗ ನಾಯಕ ಯೋಗೀಶ್ವರ್‌ ಅವರ ಧ್ವನಿಯಲ್ಲಿ ತುಂಬಿ ತುಳುಕುವ ಆತ್ಮ ವಿಶ್ವಾಸ. ಮಿಲಿಟರಿ ಮಂದಿಯೆಲ್ಲಾ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಬಾಲಿವುಡ್‌ನಲ್ಲೂ ಇಂಥ ಸಿನಿಮಾ ಬಂದಿಲ್ಲ ಎಂದು ಅವರು ಹೊಗಳಿದ್ದಾರೆ. ಹಾಗಿರುವಾಗ 'ಸೈನಿಕ" ಸೋಲುವ ಮಾತೇ ಇಲ್ಲ.

ಜುಲೈ 14 ರಂದು ಸೈನಿಕ ತೆರೆ ಕಾಣಲಿದೆ. ತೆರೆ ಕಾಣುವ ಮುನ್ನ ಚಿತ್ರದ ಬಗ್ಗೆ , ಚಿತ್ರದ ಯಶಸ್ಸಿನ ಬಗ್ಗೆ ಯೋಗೀಶ್ವರ್‌ ಹೇಳುವುದೆಲ್ಲ ವೀರಾವೇಶದ ಮಾತುಗಳೆ. ಚಿತ್ರ ನೋಡಲು ವಾಜಪೇಯಿ ಹಾಗೂ ಜಾರ್ಜ್‌ ಫರ್ನಾಂಡಿಸ್‌ ಕೂಡ ಆಸಕ್ತಿ ವ್ಯಕ್ತಪಡಿಸಿದ್ದಾರಂತೆ. ಈ ನಡುವೆ ಸೈನಿಕ ಬೊಂಬಾಟಾಗಿದೆ ಎಂದು ಕನ್ನಡದ ಹಳೆಯ ಜಮಾನಾದ ನಿರ್ದೇಶಕ ಭಾರ್ಗವ ಕೂಡ ಮೆಚ್ಚಿಕೊಂಡಿದ್ದಾರಂತೆ. ಬರಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲ , ಈ ಚಿತ್ರವನ್ನು ಕನ್ನಡದ ಎಲ್ಲ ನಿರ್ದೇಶಕರೂ ನೋಡಬೇಕು ಎಂದು ಭಾರ್ಗವ ನಿರ್ದೇಶಕರ ಸಂಘಕ್ಕೆ ಪತ್ರ ಬರೆದಿದ್ದಾರೆ.

ಇದಿಷ್ಟು ಸೈನಿಕನ ಗುಣಮಟ್ಟದ ವೃತ್ತಾಂತ! ಇನ್ನು ಪ್ರಚಾರದ ಲೆಕ್ಕಕ್ಕೆ ಬಂದರೆ ಸೈನಿಕನಿಗೆ ಫುಲ್‌ ಮಾರ್ಕ್ಸ್‌. ಆಟೋಗಳ ಬೆನ್ನಿಗೆ ಸೈನಿಕ ಚಿತ್ರದ ಹೆಸರನ್ನು ಬರೆಸುವ ಮೂಲಕ ಯೋಗೀಶ್ವರ್‌ ಪ್ರಚಾರಕ್ಕೆ ಹೊಸ ತಂತ್ರ ಕಂಡುಕೊಂಡಿದ್ದಾರೆ. ಖರ್ಚೇನೂ ಹೆಚ್ಚಿಲ್ಲ . ಬಣ್ಣಕ್ಕೆ 15 ರುಪಾಯಿ, ಚಿತ್ರಕಾರನಿಗೆ 5 ರುಪಾಯಿ. ಇನ್ನು ಹೆಸರು ಬರೆಸಿಕೊಂಡ ಆಟೋ ಮಾಲಿಕನಿಗೆ ಚಿತ್ರದ ಒಂದು ಕ್ಯಾಸೆಟ್‌ ಹಾಗೂ ಒಂದು ಕೂಪನ್‌. ಲಕ್ಕಿ ಕೂಪನ್‌ ಬಂಪರ್‌ ವಿಜೇತನಿಗೆ ಆಟೋ, ನಂತರದ 20 ಮಂದಿಗೆ ಗ್ಯಾಸ್‌ಕಿಟ್‌ ನೀಡಲು ಯೋಗೀಶ್ವರ್‌ ಉದ್ದೇಶಿಸಿದ್ದಾರೆ. ಹಾಗಾಗಿ ಕರ್ನಾಟಕದ ತುಂಬೆಲ್ಲಾ ಆಟೋಗಳ ಬೆನ್ನಿಗೆ ಸೈನಿಕ ಅಂಟಿಕೊಂಡಿದ್ದಾನೆ. ಆಟೋದಲ್ಲಿ ಸೈನಿಕನ ಕರ್ನಾಟಕ ಪ್ರವಾಸ ಎನ್ನಲಿಕ್ಕಡ್ಡಿಯಿಲ್ಲ!

English summary
If Sainika flops, I will declare myself as Non-patriot : Yogishwar
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada