»   » ಶಶಿಕುಮಾರ್‌ ಫಸ್ಟ್‌ನೈಟಿಗೆ ವಾಸ್ತು ಪ್ರಾಬ್ಲಂ

ಶಶಿಕುಮಾರ್‌ ಫಸ್ಟ್‌ನೈಟಿಗೆ ವಾಸ್ತು ಪ್ರಾಬ್ಲಂ

Subscribe to Filmibeat Kannada

ಶಶಿಕುಮಾರ್‌ಗೆ ಫಸ್ಟ್‌ನೈಟು !
ಇನ್ನೇನು ಮನದನ್ನೆ ಈಗ ತೆಕ್ಕೆಗೆ ಬರುತ್ತಾಳೆ ಅಂದುಕೊಳ್ಳುವಷ್ಟರಲ್ಲಿ ಕರಡಿ ಥರ ದೊಡ್ಡಣ್ಣ ಬಂದುಬಿಡೋದೆ. ‘ಈ ಮನೆ ಫಸ್ಟ್‌ ನೈಟಿಗೆ ಸರಿಯಾಗಿಲ್ಲ. ವಾಸ್ತು ಹೊಂದಲ್ಲ’ ಅಂತ ದೊಡ್ಡಣ್ಣ ಹೇಳಿದಾಗ ಶಶಿಕುಮಾರ್‌ಗೆ ಕಾಮ ಸಂಕಟ !

ಇದು ‘ರೀ.. ಸ್ವಲ್ಪ ಬರ್ತೀರಾ’ ಸಿನಿಮಾದ ಶೂಟಿಂಗ್‌ ಸ್ಪಾಟಲ್ಲಿ ನಾವು ನೋಡಿದ ಸೀನು. ಶೂಟಿಂಗ್‌ ನಡೆದದ್ದು ಬೆಂಗಳೂರಿನ ಬಸವೇಶ್ವರನಗರದ ಸರಿಗಮ ವಿಜಿ ಮನೆಯಲ್ಲಿ. ಎಸ್‌.ಕೆ.ಚಿತ್ರಾಲಯ ಲಾಂಛನದ ಈ ಸಿನಿಮಾಗೆ ಅಪಘಾತದ ನಂತರ ಮಾರುಕಟ್ಟೆ ಕಳಕೊಂಡಿರುವ ಸಂಸದ ಶಶಿಕುಮಾರ್‌ ನಾಯಕ. ಆಫ್‌ಕೋರ್ಸ್‌ ಅವರೇ ನಿರ್ಮಾಪಕ ಕೂಡ.

ಶೂಟಿಂಗ್‌ ಸ್ಪಾಟಲ್ಲಿ ನಮ್ಮ ಕಣ್ಣಿಗೆ ಬಿದ್ದವರು ನಮ್ಮ ಕಣ್ಣಿಗೆ ಶಶಿಕುಮಾರ್‌, ದಾಮಿನಿ, ದೊಡ್ಡಣ್ಣ, ಪ್ರಮೀಳಾ ಜೋಷಾಯ್‌, ಡಿಂಗ್ರಿ ನಾಗರಾಜ್‌, ಮುಖ್ಯಮಂತ್ರಿ ಚಂದ್ರು. ಚಿತ್ರಕ್ಕೆ ಎ.ಆರ್‌.ಬಾಬು ಕಥೆ ಬರೆದಿದ್ದಾರೆ. ನಿರ್ದೇಶನ ಕೂಡ ಅವರದ್ದೇ. ಸಿ.ಡಿ.ರಾಜು ಛಾಯಾಗ್ರಹಕ, ವೆಂಕಟನಾರಾಯಣ್‌ ಎಂಬ ಕೇಳದ ಹೆಸರಿನ ಸಂಗೀತ ನಿರ್ದೇಶಕ, ರಾಜಶೇಖರ ರೆಡ್ಡಿ ಸಂಕಲನಕಾರ, ಕೌರವ ವೆಂಕಟೇಶ್‌ ಸಾಹಸಿಗ, ದಿಲೀಪ್‌ ನರ್ತಕ- ಇದು ಚಿತ್ರದ ಟೀಮು. ಭಂಗೀರಂಗ, ಶ್ರೀಚಂದ್ರು, ವಿ.ಮನೋಹರ್‌, ಎ.ಆರ್‌.ಬಾಬು ಹಾಗೂ ನಾಗರಾಜು ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada