»   » ಹ್ಯಾಟ್ರಿಕ್‌ಹೀರೋ ಶಿವರಾಜ್‌ಕುಮಾರ್‌ 44 !

ಹ್ಯಾಟ್ರಿಕ್‌ಹೀರೋ ಶಿವರಾಜ್‌ಕುಮಾರ್‌ 44 !

Subscribe to Filmibeat Kannada

ಬೆಂಗಳೂರು : ಹ್ಯಾಟ್ರಿಕ್‌ಹೀರೋ ಶಿವರಾಜ್‌ಕುಮಾರ್‌ ಅವರ 44ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಖಿಲ ಕರ್ನಾಟಕ ಶಿವರಾಜ್‌ಕುಮಾರ್‌ ಅಭಿಮಾನಿಗಳ ಸಂಘ ನಿರ್ಧರಿಸಿದೆ.

ಮಂಗಳವಾರ(ಜು.12) ಬೆಂಗಳೂರಿನಲ್ಲಿ ಮತ್ತು ಬುಧವಾರ ಚಿತ್ರದುರ್ಗದಲ್ಲಿ ಶಿವರಾಜ್‌ಕುಮಾರ್‌ ಅವರ ಹುಟ್ಟು ಹಬ್ಬದ ಬೃಹತ್‌ ಕಾರ್ಯಕ್ರಮಗಳನ್ನು ರೂಪಿಸಿರುವುದಾಗಿ ಸಂಘದ ಅಧ್ಯಕ್ಷ ಪ್ರಕಾಶ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾರ್ವತಮ್ಮ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌, ನಟಿ ರಾಧಿಕಾ ಸೇರಿದಂತೆ ಚಿತ್ರರಂಗದ ವಿವಿಧ ಗಣ್ಯರು ಪಾಲ್ಗೊಳ್ಳುವರು. ‘ಜೋಗಿ ’ ಚಿತ್ರದ ನಿರ್ದೇಶಕ ಪ್ರೇಮ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಬುಧವಾರ ಚಿತ್ರದುರ್ಗದಲ್ಲಿ ಶಿವರಾಜ್‌ಕುಮಾರ್‌ ಹುಟ್ಟುಹಬ್ಬ ಆಚರಿಸಲು ಸಿದ್ಧತೆಗಳು ನಡೆದಿವೆ. ಸುಮಾರು 15ಲಕ್ಷ ರೂ. ಅಂದಾಜಿನಲ್ಲಿ ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿದೆ. ಸಂಸದ ಎನ್‌.ವೈ.ಹನುಮಂತಪ್ಪ, ಶಾಸಕ ತಿಪ್ಪಾರೆಡ್ಡಿ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಸಂಘದ ಮುಖಂಡ ಕಾಂತರಾಜ್‌ ತಿಳಿಸಿದ್ದಾರೆ.

14ಕಿ.ಗ್ರಾಂ. ತೂಕದ ಮದಕರಿ ನಾಯಕನ ಪ್ರತಿಮೆಯನ್ನು ಶಿವರಾಜ್‌ಕುಮಾರ್‌ ಅವರಿಗೆ ಈ ಸಂದರ್ಭದಲ್ಲಿ ಅಭಿಮಾನಿಗಳು ಅರ್ಪಿಸುವರು. ಹುಟ್ಟುಹಬ್ಬವನ್ನು ಸಾರ್ಥಕಗೊಳಿಸಲು ಅನೇಕ ಜನಪರ ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಂಡಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada