»   » ಮಲ್ಟಿ ಕಲರ್‌ನಲ್ಲಿ ದಿಲೀಪ್‌ಕುಮಾರನ ನಯಾದೌರ್‌

ಮಲ್ಟಿ ಕಲರ್‌ನಲ್ಲಿ ದಿಲೀಪ್‌ಕುಮಾರನ ನಯಾದೌರ್‌

Subscribe to Filmibeat Kannada


ಹಿಂದಿ ಚಿತ್ರರಂಗದ ಮರೆಯಲಾಗದ ಚಿತ್ರಗಳು ಈಗ ಕಪ್ಪು-ಬಿಳುಪಿನಿಂದ ಬಣ್ಣದ ಚಿತ್ರಗಳಾಗಿ ಮಾರ್ಪಾಟಾಗುತ್ತಿವೆ. ಮೊದಲು ಮೊಘಲ್-ಇ-ಅಜಾಮ್ ನಂತರ ದೇವಾನಂದ್ ಅಭಿನಯದ ಹಮ್ ದೋನೋ. ಈಗ ಈ ಸಾಲಿಗೆ ದಿಲೀಪ್ ಕುಮಾರ್ ಅಭಿನಯದ ನಯಾ ದೌರ್.

ಬಿ.ಆರ್ .ಛೋಪ್ರಾ ಸೋದರರ ನಿರ್ಮಾಣದ ನಯಾ ದೌರ ಮತ್ತೊಮ್ಮೆ ತೆರೆ ಕಾಣಲು ಸಿದ್ಧವಾಗಿದ್ದು, ಅಗಸ್ಟ್ ಮೊದಲವಾರದಲ್ಲಿ ಚಿತ್ರರಸಿಕರ ಮುಂದೆ ಬರಲಿದೆ. ಕಾಕತಾಳೀಯವೆಂಬಂತೆ1957ರ ಅಗಸ್ಟ್ ತಿಂಗಳ ಮೊದಲ ವಾರದಲ್ಲೆ ಬಿಡುಗಡೆ ಆಗಿತ್ತು.

ಆಶಾ ಭೊಂಸ್ಲೆಗೆ ಗಾಯಕಿಯಾಗಿ ಭರವಸೆ ಮೂಡಿಸಿದ ಈ ಚಿತ್ರಕ್ಕೆ ದಿವಂಗತ ಓ.ಪಿ.ನಯ್ಯರ್ ರವರ ಸುಮಧುರ ಸಂಗೀತದ ಲೇಪವಿದೆ.ಈ ಚಿತ್ರದ ಹಾಡುಗಳನ್ನು ಅಂದು ಜನರಿಗೆ ತಲುಪಿಸಿದ ಸ ರಿ ಗ ಮ ಪ ಸಂಸ್ಥೆ ಇಂದು ಡಾಲ್ಬಿ ಡಿಜಿಟಲ್ ಸೌಂಡ್ ತಂತ್ರಜ್ಞಾನ ಅಳವಡಿಸಿ, ಹಾಡುಗಳ ಗುಣಮಟ್ಟವನ್ನು ಹೆಚ್ಚಿಸಿ, ಮಾರಾಟ ಮಾಡಲು ಮುಂದಾಗಿದೆ.ಹಾಡುಗಳನ್ನು ರಿಮಿಕ್ಸ್ ಮಾಡದೆ ಮೂಲ ಹಾಡುಗಳನ್ನೇ ಉಳಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

ಕನ್ನಡದಲ್ಲಿ ಬಣ್ಣದ ಲೇಪನವಿಲ್ಲದಿದ್ದರೂ ಪುನಃ ತೆರೆಕಂಡ ದೂರದ ಬೆಟ್ಟ ಮುಂತಾದ ಚಿತ್ರಗಳನ್ನು ಯಶಸ್ಸು ಗಳಿಸಿದ್ದು ಸರ್ವ ವಿದಿತ.ಹಿಂದಿಯಲ್ಲಿ ಶುರುವಾಗಿರುವ ಹಳೆ ಚಿತ್ರಗಳಿಗೆ ಬಣ್ಣದ ಲೇಪನ ನೀಡುವ ಕಾರ್ಯ ಕನ್ನಡದಲ್ಲೂ ಮುಂದುವರೆಯಲಿ. ರಾಜ್‌ಕುಮಾರ್‌ ಅಭಿನಯದ ಕಸ್ತೂರಿ ನಿವಾಸ, ಪಂತುಲು ಅವರ ಸ್ಕೂಲ್‌ ಮಾಸ್ಟರ್ ಮುಂತಾದ ಚಿತ್ರಗಳು ಬಣ್ಣದಲ್ಲಿ ಮತ್ತೆ ಮೂಡಿಬಂದರೆ ಚೆನ್ನ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada