»   » ಪ್ರೇಮ್‌ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್‌?

ಪ್ರೇಮ್‌ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್‌?

Posted By:
Subscribe to Filmibeat Kannada

ಮೂರು ಜನ ಮುಂಬೈ ಬೆಡಗಿಯರು ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದಲ್ಲಿದ್ದಾರೆ. ನಾಯಕಿಯಾಬ್ಬಳ ಪಾತ್ರಕ್ಕೆ ತಮಿಳು, ತೆಲುಗಿನಲ್ಲಿ ಗಮನ ಸೆಳೆದಿರುವ ತಮನ್ನಾ ಆಯ್ಕೆಯಾಗಿದ್ದಾರೆ. ಉಳಿದ ನಾಯಕಿಯರ ಪಾತ್ರಗಳಿಗೆ ಅಮಿಷಾ ಪಟೇಲ್‌, ಮಲ್ಲಿಕಾ ಶೆರಾವತ್‌ರನ್ನು ಕರೆತರುವ ಬಯಕೆ ಪ್ರೇಮ್‌ರಲ್ಲಿದೆ.

ಮಲ್ಲಿಕಾ ಕರೆತರುವಲ್ಲಿ ನಮ್ಮದೇನೂ ಗಿಮಿಕ್‌ ಇಲ್ಲ. ನನಗೆ ಥಳಕು ಬಳುಕಿಗಿಂತಲೂ ಪಾತ್ರಗಳು ಮುಖ್ಯ. ‘ಜೋಗಿ’ಗಾಗಿ ಯಾನಾ ಗುಪ್ತಾರನ್ನು ಕರೆತಂದರೂ, ಪ್ರೇಕ್ಷಕರ ಕೆರಳಿಸುವಂತೆ ನಾವೇನು ಆಕೆಯನ್ನು ಬಳಸಿಕೊಳ್ಳಲಿಲ್ಲ ಎನ್ನುತ್ತಾರೆ ಪ್ರೇಮ್‌.

ಕನ್ನಡದ ಹುಡುಗಿಯರಿಗೆ ಅವಕಾಶ ಕೊಡಲು ನಮಗೂ ಇಷ್ಟ. ಆದರೆ ಸಲ್ಲದ ಕಿರಿಕ್‌ ಮಾಡ್ತಾರೆ. ಹೀಗಾಗಿ ಅಂಥವರ ಹೊಟ್ಟೆ ಉರಿಸಲು, ಬಾಂಬೆ ಹುಡುಗಿಯರ ಕರೆತರುತ್ತಿದ್ದೇವೆ. ಈ ಚಿತ್ರದಲ್ಲಿ 9 ಹಾಡುಗಳಿದ್ದು, ಹಾಡುಗಳೇ ಚಿತ್ರದ ಜೀವಾಳ. ಸುಮಾರು 45 ನಿಮಿಷ ಗಾನಗಂಗೆಯನ್ನು ಸವಿಯಬಹುದು. ಒಂದು ಹಾಡನ್ನು ಲತಾ ಮಂಗೇಶ್ಕರ್‌ ಹಾಡಲಿದ್ದಾರೆ. ಆರ್‌.ಪಿ.ಪಟ್ನಾಯಕ್‌ ಸಂಗೀತ ನೀಡಿದ್ದಾರೆ ಎಂದು ಪ್ರೇಮ್‌ ಚಿತ್ರದ ವರದಿ ಒಪ್ಪಿಸಿದ್ದಾರೆ.

ರಜನಿ ಕಾಂತ್‌ ಚಿತ್ರ ನಿರ್ದೇಶನ ಮಾಡಲು ಮತ್ತೊಂದು ಕಡೆ ಪ್ರೇಮ್‌ ಹೋಮ್‌ವರ್ಕ್‌ ನಡೆಸಿದ್ದಾರೆ.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada