»   » ಸಿನಿಮಾದಲ್ಲಿ ನಟಿಸಲಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ!

ಸಿನಿಮಾದಲ್ಲಿ ನಟಿಸಲಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ!

Posted By: Super
Subscribe to Filmibeat Kannada

ಬೆಂಗಳೂರು, ಆಗಸ್ಟ್ 11 : ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಈವರೆಗೆ ತೆರೆ ಹಿಂದಿದ್ದ ಅವರು, ತೆರೆ ಮೇಲೆ ಬರಲಿದ್ದಾರೆ.

ಪ್ರೇಮ್ ನಟಿಸಿ, ನಿರ್ದೇಶಿಸುತ್ತಿರುವ ಪ್ರೀತಿ ಏಕೆ ಭೂಮಿ ಮೇಲಿದೆಚಿತ್ರದಲ್ಲಿ ಪ್ರೀತಿಯ ಮಹತ್ವವನ್ನು ಕುಮಾರಸ್ವಾಮಿ ವಿವರಿಸಲಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಸುಭಾಷ್ ಭರಣಿ, ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಅವರನ್ನು ಸಹಾ ಚಿತ್ರದಲ್ಲಿ ಕಾಣಬಹುದಾಗಿದೆ. ಸಿದ್ಧಗಂಗಾ ಶ್ರೀಗಳು ಸಹಾ ಪ್ರೀತಿಯ ಬಗ್ಗೆ ಚಿತ್ರದಲ್ಲಿ ಮಾತನಾಡಿದ್ದಾರೆ.

ಚೆನ್ನಾಂಬಿಕಾ ಫಿಲಂಸ್ ಬ್ಯಾನರ್ ನಡಿ ಕುಮಾರಸ್ವಾಮಿ ಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ಈ ಹಿಂದೆ ತೊಡಗಿಸಿಕೊಂಡವರು. ಸೂರ್ಯವಂಶ, ಚಂದ್ರ ಚಕೋರಿ ಚಿತ್ರಗಳ ನಿರ್ಮಿಸಿ, ಕುಮಾರಸ್ವಾಮಿ ಯಶಸ್ಸು ಕಂಡಿದ್ದಾರೆ.

ಚಲನಚಿತ್ರದಲ್ಲಿ ಅಭಿನಯಿಸಿದ ಮುಖ್ಯಮಂತ್ರಿಗಳಲ್ಲಿ ಕುಮಾರಸ್ವಾಮಿ ಮೊದಲಿಗರೇನಲ್ಲ. ಮರಣ ಮೃದಂಗ ಮತ್ತು ಪ್ರಜಾಶಕ್ತಿ ಚಿತ್ರಗಳಲ್ಲಿ ರಾಮಕೃಷ್ಣ ಹೆಗಡೆ ನಟಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)

English summary
Chief Minister H.D. Kumaraswamy is all set to make a brief appearance in the forthcoming Kannada film Preethi Eke Bhoomi Melidhe to talk about love.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada