For Quick Alerts
  ALLOW NOTIFICATIONS  
  For Daily Alerts

  ಇನ್ನೊಬ್ಬ ಪೊಲೀಸ್‌ ಚಿತ್ರ-ದಯಾನಾಯಕ್‌

  By Staff
  |

  * ದಟ್ಸ್‌ಕನ್ನಡ ಬ್ಯರೋ

  ತಮ್ಮ ಕೆಲಸದ ಖದರಿನಿಂದ ನಿಜ ಜೀವನದ ಹೀರೋಗಳಾಗುವ ಪೊಲೀಸರ ಸಾಹಸ ಗಾಥೆಯನ್ನು ಚಿತ್ರಗಳಾಗಿಸಿದ ಸಾಕಷ್ಟು ಉದಾಹರಣೆಗಳು ಕನ್ನಡ ಚಿತ್ರೋದ್ಯಮದಲ್ಲಿ ಸಿಗುತ್ತವೆ. ಸಾಂಗ್ಲಿಯಾನ ಬಗ್ಗೆ ಮೂರು, ಐಪಿಎಸ್‌ ಕೆಂಪಯ್ಯ ಕಥೆಯಾಧಾರಿಸಿದ ಒಂದು ಚಿತ್ರ ಬಂದು ದುಡ್ಡು ಮಾಡಿದವು. ಆದರೆ ಕಳೆದ ವರ್ಷ ಪೊಲೀಸ್‌ ಅಧಿಕಾರಿ ಅಬ್ದುಲ್‌ ಅಜೀಂ ವರಸೆಗಳನ್ನು ಆಧರಿಸಿ ತೆರೆಗೆ ಬಂದ ‘ಪೊಲೀಸ್‌ ಆಫೀಸರ್‌’ ಚಿತ್ರ ತೋಪಾಯಿತು.

  ಈಗ ನಿರ್ಮಾಪಕ ಧನರಾಜ್‌ ಮಂಗಳೂರ್‌ ಕಣ್ಣು ಕರಾವಳಿ ಕನ್ನಡಿಗ, ಇನ್ಸ್‌ಪೆಕ್ಟರ್‌ ದಯಾನಂದ್‌ ನಾಯಕ್‌ ಮೇಲೆ ಬಿದ್ದಿದೆ. ಮುಂಬಯಿ ಪಾತಕ ಲೋಕದಲ್ಲಿ ನಡುಕ ಹುಟ್ಟಿಸಿದ ದಯಾನಂದ್‌, ದಯಾ ನಾಯಕ್‌ ಅಂತಲೇ ಹೆಸರುವಾಸಿ. ಎನ್‌ಕೌಂಟರ್‌ಗಳಲ್ಲಿ ಸುಮಾರು ನಲವತ್ತು ಚಿಲ್ಲರೆ ಭೂಗತ ಪಾತಕಿಗಳನ್ನು ಇಲ್ಲವಾಗಿಸಿರುವ ದಯಾ ನಾಯಕ್‌ ಈಗ ಚಿತ್ರವಾಗುತ್ತಿದ್ದಾರೆ.

  ದಯಾ ನಾಯಕ್‌ ದಕ್ಷಿಣ ಕನ್ನಡದವರು. ಹಾಗಾಗಿ ಮಂಗಳೂರು ಧನರಾಜ್‌ಗೆ ಅವರ ಬಗ್ಗೆ ಮೊದಲಿಂದಲೂ ಹೆಮ್ಮೆ. ಇತ್ತೀಚೆಗೆ ನಿರ್ದೇಶಕ ಆನಂದ್‌ ಪಿ. ರಾಜ್‌ ಜೊತೆ ಚರ್ಚಿಸಿದ್ದರ ಫಲಶೃತಿ ಹೊಸ ಚಿತ್ರದ ನಿರ್ಮಾಣ.

  ಚಿತ್ರದ ಹೆಸರು ‘ದಯಾ ನಾಯಕ್‌’. ನಾಯಕಿಗಾಗಿ ಹೊಸ ಮುಖದ ಹುಡುಕಾಟ ನಡೆದಿದೆ. ಅವಿನಾಶ್‌, ಧನರಾಜ್‌, ಸಾಧು ಕೋಕಿಲ, ಸುಮಿತ್ರ ಮೊದಲಾದವರು ತಾರಾ ಬಳಗದಲ್ಲಿದ್ದಾರೆ.

  ತಮ್ಮ ಕಾರ್ಯವೈಖರಿಗೆ ಲಕ್ಷಾಂತರ ರುಪಾಯಿ ಬಹುಮಾನ ಪಡೆದಿರುವ ದಯಾ ನಾಯಕ್‌, ಬಂದ ಹಣವನ್ನೆಲ್ಲ ತಾವು ಹುಟ್ಟಿದ ಹಳ್ಳಿಯಲ್ಲಿ ಶಾಲೆ ಕಟ್ಟೋಕೆ ಬಳಸಿದ್ದಾರೆ. ಇವತ್ತಿಗೂ ಮುಂಬಯಿಯ ಸಿ.ಐ. ಘಟಕದಲ್ಲಿ ಇನ್ಸ್‌ಪೆಕ್ಟರ್‌ ಆಗಿರುವ ದಯಾ ನಾಯಕ್‌ ಕುರಿತ ಚಿತ್ರದಲ್ಲಿ ಅವರ ಜೀವನದ ನೈಜ ಘಟನೆಗಳನ್ನೇ ಹೆಚ್ಚಾಗಿ ತರುವುದು ಆನಂದ್‌ ಪಿ. ರಾಜ್‌ ಉಮೇದಿ. ಚಿತ್ರದ ಬಗ್ಗೆ ಸಾಯಿಕುಮಾರ್‌ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ದಯಾ ನಾಯಕ್‌ ಅವರ ಮ್ಯಾನರಿಸಂಗಳನ್ನು ಕೇಳಿ ತಿಳಿದಿದ್ದಾರೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X