»   » ಅವಕಾಶದ ಮಹಾಪೂರವೇ ರಕ್ಷಿತಾ ಕಾಲಡಿಯಲ್ಲಿ ಬಿದ್ದಿದೆ

ಅವಕಾಶದ ಮಹಾಪೂರವೇ ರಕ್ಷಿತಾ ಕಾಲಡಿಯಲ್ಲಿ ಬಿದ್ದಿದೆ

Posted By: Super
Subscribe to Filmibeat Kannada

ಟಾಲಿವುಡ್‌ನ ಸದ್ಯದ ಸೆನ್ಷೇಷನ್‌ ಹುಡುಗಿ ಮಮತಾ ರಾವ್‌ ಪುತ್ರಿ ರಕ್ಷಿತಾ.
'ಅಪ್ಪು" ಚಿತ್ರದ ರೀಮೇಕು 'ಈಡಿಯಟ್‌" ಆಂಧ್ರಪ್ರದೇಶದಲ್ಲಿ ಸಂಚಲನೆ ಸೃಷ್ಟಿಸಿದೆ. ಆ ಮೂಲಕ ರೀಮೇಕು ಚಿತ್ರಗಳ ಯಶಸ್ಸಿನಿಂದ ಬೀಗುವ ಭಾಗ್ಯ ಸ್ಯಾಂಡಲ್‌ವುಡ್‌ಗಷ್ಟೇ ಅಲ್ಲ, ಟಾಲಿವುಡ್‌ಗೂ ಉಂಟು ಅಂದುಕೊಳ್ಳಬಹುದು. ಈಡಿಯಟ್‌ ಚಿತ್ರ ಕನ್ನಡದ ರೀಮೇಕು ಎಂಬುದು ಇನ್ನೊಂದು ಹೆಮ್ಮೆಯ ವಿಷಯ.

ಈ ಚಿತ್ರ ಈ ಪಾಟಿ ಸದ್ದು ಮಾಡುತ್ತದೆ ಅಂತ ನಿರ್ದೇಶಕ ಪೂರಿ ಜಗನ್ನಾಥ್‌ ಕನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ. ಕತೆ ಸಾಧಾರಣ ಅನ್ನೋದು ಅವರ ಅಭಿಪ್ರಾಯ. ಹಾಗಿದ್ದೂ 'ಅಪ್ಪು"ವಿನ ಯಶಸ್ವಿ ಓಟಕ್ಕೆ ಸರಿಗಟ್ಟುವಂಥಾ ಓಪನಿಂಗ್‌ 'ಈಡಿಯಟ್‌"ಗೆ ಸಿಕ್ಕಿದೆ. ಅದಿರಲಿ, ಈ ಚಿತ್ರದ ಯಶಸ್ಸಿನ ಗುಟ್ಟೇನು?

ಸಿನಿಮಾ ನೋಡಿ ಹೊರಬರುವವರನ್ನ ಕೇಳಿನೋಡಿದರೆ, ಖುದ್ದು ಮಮತಾ ರಾವ್‌ ಬೆಚ್ಚಿ ಬೀಳುತ್ತಾರೆ. ಯಾಕೆಂದರೆ, ಮೊದಲ ನೋಟಕ್ಕೇ ರಕ್ಷಿತಾಗೆ ಸೋತ ತೆಲುಗರ ಸಂಖ್ಯೆ ದೊಡ್ಡದಿದೆ. ರವಿತೇಜ ಅಭಿಮಾನಿಗಳ ಕೆಲವು ಓಟುಗಳೂ ಕೂಡ ರಕ್ಷಿತಾ ಪಕ್ಷಕ್ಕೆ ಬೀಳುತ್ತವೆ. 'ಅಪ್ಪು"ಗಿಂತ ಕೊಂಚ ಮುಂದಾಗೇ ಬಿಂದಾಸ್‌ ಎಂಬಂತೆ 'ಈಡಿಯಟ್‌"ನಲ್ಲಿ ರಕ್ಷಿತಾ ಕಾಣಿಸಿಕೊಂಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಸ್ಯಾಂಡಲ್‌ವುಡ್ಡಿಗಳು.

ಒಟ್ಟಿನಲ್ಲಿ ರಕ್ಷಿತಾ ಮನೆಗೆ ಈಗ ತೆಲುಗು ನಿರ್ಮಾಪಕರ ಫೋನ್‌ ಕರೆಗಳು ಟ್ರಿಣ್ಣಿಸುತ್ತಿರುವುದಂತೂ ದಿಟ. ಆಫರುಗಳಿಗೆ ಒಪ್ಪಿಗೆ ಕೊಡುವ ವಿಷಯದಲ್ಲಿ ಜಿಜ್ಞಾಸೆಗೆ ಬಿದ್ದಿರುವ ರುಚಿತಾ ಆಂಧ್ರದ ಹುಡುಗಿ ಆಗಿಬಿಟ್ಟರೆ?

ಏನೇ ಆಗಲಿ, ನನ್ನ ಮೊದಲ ಆದ್ಯತೆ ಕನ್ನಡ ಚಿತ್ರಗಳಿಗೆ ಅಂತ ಹೇಳುವುದರ ಮೂಲಕ ರಕ್ಷಿತಾ ಕನ್ನಡ ಪ್ರೇಮವನ್ನು ತೋರಿಸಿ, ತೆಲುಗು ಬಿಡ್ಡಾಗಳ ಹಪಾಹಪಕ್ಕೆ ತಣ್ಣೀರೆರಚಿದ್ದಾರೆ. ಅಂದಹಾಗೆ, ರಕ್ಷಿತಾ ಇನ್ನೂ ಹೆಸರಿಡದ ಕನ್ನಡ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇದರ ನಾಯಕ-ವಿಜಯ ರಾಘವೇಂದ್ರ. ಎಂ.ಎಸ್‌.ರಾಜಶೇಖರ್‌ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

English summary
Rakshitha is sensation girl in Tollywood

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X