»   » ಸೀತಾರಾಂಗೆ ಟಾಟಾ ಹೇಳಿದ ರಕ್ಷಿತಾ!

ಸೀತಾರಾಂಗೆ ಟಾಟಾ ಹೇಳಿದ ರಕ್ಷಿತಾ!

Posted By:
Subscribe to Filmibeat Kannada


ಟಿ.ಎನ್‌.ಸೀತಾರಾಂ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣ ಶುರುವಾಗುವ ಮುನ್ನವೇ, ನಾಯಕಿ ಪಾತ್ರಧಾರಿ ರಕ್ಷಿತಾ ಮೇಡಂ ಟಾಟಾ ಮಾಡಿದ್ದಾರೆ! ಸುಂಟರಗಾಳಿ ಹುಡುಗಿಯನ್ನು ನಂಬಿ, ಆರಂಭದಲ್ಲೇ ಸೀತಾರಾಂ ಮುಗ್ಗರಿಸಿದರು ಎಂದು ಗಾಂಧಿನಗರದಲ್ಲಿ ಕೆಲವರು ಮುಸಿಮುಸಿ ನಗುತ್ತಿದ್ದಾರೆ!

ದೀರ್ಘಾವಧಿಯ ಕಾಲ್‌ಶೀಟ್‌ ನೀಡಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಇದರಿಂದ ಬೇರೆ ನಿರ್ಮಾಪಕರಿಗೆ ತೊಂದರೆಯಾಗಲಿದೆ. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ, ಸೀತಾರಾಂ ಅಹ್ವಾನವನ್ನು ನಿರಾಕರಿಸಲೇಬೇಕಾಗಿದೆ. ಒಬ್ಬ ಉತ್ತಮ ನಿರ್ದೇಶಕನ ಜೊತೆ ಕೆಲಸಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ರಕ್ಷಿತಾ ಮೊಸಳೆ ಕಣ್ಣೀರು ಸುರಿಸಿದ್ದಾಳೆ.

‘ಮುಕ್ತ ’ ನಂತರ ಕಿರುತೆರೆಯಿಂದ ಪುಟ್ಟ ವಿರಾಮ ಪಡೆದಿರುವ ಸೀತಾರಾಂ, ಎರಡು ಕಮರ್ಷಿಯಲ್‌ ಚಿತ್ರ ಮಾಡಲು ಯೋಜನೆ ರೂಪಿಸಿದ್ದರು. ಅದರಲ್ಲಿ ಒಂದು ಸಿನಿಮಾದ ನಾಯಕಿಯಾಗಿ ರಕ್ಷಿತಾರನ್ನು ಅವರು ಆಯ್ಕೆಮಾಡಿದ್ದರು.

ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದ ಸೀತಾರಾಂ ಅವರು, ರಕ್ಷಿತಾ ಮುಖ ಭಾರತೀಯ ಹೆಣ್ಣುಮಕ್ಕಳ ಎಲ್ಲಾ ಭಾವಗಳನ್ನು ಬಿಂಬಿಸುತ್ತದೆ. ನನ್ನ ಚಿತ್ರದ ಪಾತ್ರಕ್ಕೆ ರಕ್ಷಿತಾ ಅತಿಹೆಚ್ಚು ಹೊಂದಿಕೆ ಆಗುತ್ತಾಳೆ ಎಂದು ಪ್ರಮಾಣ ಪತ್ರ ದಯಪಾಲಿಸಿದ್ದರು. ಈಗ ರಕ್ಷಿತಾ ಯಾಕೋ ಸೀತಾರಾಂರಿಂದ ದೂರ ಸರಿದಿದ್ದಾಳೆ!

ಪೂರಕ ಓದಿಗೆ :
ರಕ್ಷಿತಾ ಜೊತೆ ಸೀತಾರಾಮ್‌ ಮತ್ತೆ ಬಂದರು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada