»   » ತಮ್ಮ ಚಿತ್ರಗಳು ದುಡ್ಡಿಗೆ ಮೋಸ ಮಾಡೇ ಇಲ್ಲ

ತಮ್ಮ ಚಿತ್ರಗಳು ದುಡ್ಡಿಗೆ ಮೋಸ ಮಾಡೇ ಇಲ್ಲ

Posted By: Staff
Subscribe to Filmibeat Kannada

'ಸಕ್ಸಸ್‌ ಅಂದ್ರೆ ನಂಗಿಷ್ಟ. ನಾನು ಸೋಲನ್ನೂ ಅದೇ ಥರ ಇಷ್ಟಪಡ್ತೀನಿ. ಹೊರ ಜಗತ್ತು ಹೇಳೋ ಸೋಲು ನನಗೆ ಬೇಕಿಲ್ಲ. ನನ್ನೊಳಗಿನ ನಾನು ಇನ್ನೂ ಸೋತಿಲ್ಲ... ನಾನು ನಾನೇ"!

ಉಪ್ಪಿ ಮಾತಿನ ಖದರ್‌ ಇನ್ನೂ ತಣ್ಣಗಾಗಿಲ್ಲ. ಇವತ್ತು (ಅ.11) ರಿಲೀಸ್‌ ಆಗಿರುವ 'ನಾನು ನಾನೇ" ಗೆಲ್ಲುತ್ತದೋ ಸೋಲುತ್ತದೋ ಬೇರೆ ಮಾತು. ಇಷ್ಟಕ್ಕೂ ಬೇರೆಯವರ ನಿರ್ದೇಶನದ ಚಿತ್ರಗಳಲ್ಲಿ ಉಪ್ಪಿ ನಟಿಸುತ್ತಿರುವುದೇ ಕಾಸಿಗಾಗಿ. ಮೊನ್ನೆ ಏಟ್ರಿಯಾ ಹೊಟೇಲಿನಲ್ಲಿ ಇದನ್ನು ಖುಲ್ಲಂಖುಲ್ಲಾ ಹೇಳಿಯೂಬಿಟ್ಟರು.

ನಾನಿನ್ನೂ ಸೋತಿಲ್ಲ. ನನ್ನ ಚಿತ್ರಗಳು ದುಡ್ಡಿಗೆ ಮೋಸ ಮಾಡೇ ಇಲ್ಲ. ಒಂದು ಸಿನಿಮಾ ಒಂದು ಥಿಯೇಟರಿನಲ್ಲಿ 25 ವಾರ ಓಡೋದೂ ಒಂದೇ, 25 ಥಿಯೇಟರುಗಳಲ್ಲಿ ಒಂದು ವಾರ ಓಡೋದೂ ಒಂದೇ. ನನ್ನ ಹತ್ತಿರ ಫ್ಯಾಕ್ಟ್‌ ಅಂಡ್‌ ಫಿಗರ್ಸ್‌ ಇದೆ... ಹೀಗೆ ಮಾತಾಡುವಾಗ ಉಪ್ಪಿಯಲ್ಲಿ ಆತ್ಮವಿಶ್ವಾಸ ಭರಪೂರವಾಗಿತ್ತು.

'ಹಾಗಾದ್ರೆ 'ಸೂಪರ್‌ ಸ್ಟಾರ್‌", 'ನಾಗರ ಹಾವು" ಸೋತಿಲ್ಲ ಅಂತೀರಾ" ಅಂತ ಕೆಣಕಿದರೆ, 'ನನ್ನ ವಿರುದ್ಧ ಮಾತಾಡುತ್ತಿರುವವರಿಗೆಲ್ಲ ನನ್ನೊಳಗೆ ಇನ್ನೂ ಸ್ಟ್ರಾಂಗ್‌ ಆಗಿರುವ ರೈಟರ್‌ ಉತ್ತರ ಕೊಡ್ತಾನೆ. ಮುಂದಿನ ವರ್ಷ ನನ್ನ ಬಗ್ಗೇನೇ ಸಿನಿಮಾ ಮಾಡಿ ತೋರಿಸ್ತೀನಿ ನೋಡ್ತಿರಿ" ಎನ್ನುತ್ತಾ ಹುಬ್ಬು ಹಾರಿಸಿ ಸೆಡ್ಡು ಹೊಡೆದರು ಉಪ್ಪಿ !

English summary
Upendra to deliver his best in the coming year

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada