»   » ರವಿ ಬೆಳಗೆರೆ ವಕೀಲ! ಸುಧಾಮೂರ್ತಿ ಜಡ್ಜ್‌!!

ರವಿ ಬೆಳಗೆರೆ ವಕೀಲ! ಸುಧಾಮೂರ್ತಿ ಜಡ್ಜ್‌!!

Posted By:
Subscribe to Filmibeat Kannada


ಪ್ರತಿಷ್ಠಿತರನ್ನು, ಗಣ್ಯರನ್ನು ಕಿರುತೆರೆಯ ಧಾರಾವಾಹಿಗಳಿಗೆ ಕರೆತರುವ ಅಭ್ಯಾಸ ಮಾಡಿಸಿದ್ದು, ಟಿ.ಎನ್‌.ಸೀತಾರಾಂ. ಈ ಸಂಪ್ರದಾಯವನ್ನು ನಿರ್ದೇಶಕ ವಿನು ಬಳಂಜ ಮುಂದುವರೆಸಿದ್ದಾರೆ. ಆ ಪರಿಣಾಮವೇ, ಇನ್ಫೋಸಿಸ್‌ ಮುಖ್ಯಸ್ಥೆ ಸುಧಾಮೂರ್ತಿ, ಕಿರುತೆರೆಗಾಗಿ ಬಣ್ಣ ಹಚ್ಚಲಿದ್ದಾರೆ.

ಈ ಟಿ.ವಿ ಕನ್ನಡ ಚಾನೆಲ್‌ನಲ್ಲಿ ಸೋಮವಾರದಿಂದ ಶುಕ್ರವಾರದ ತನಕ 9.30ರಿಂದ 10ಗಂಟೆ ತನಕ ಪ್ರಸಾರವಾಗುವ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಅವರು ಅಭಿನಯಿಸಲಿದ್ದಾರೆ. ನ್ಯಾಯಾಧೀಶೆಯ ಪಾತ್ರವನ್ನು ಅವರು ನಿರ್ವಹಿಸಲಿದ್ದು, ಈ ಸಂಬಂಧದ ಮಾತುಕತೆ ಫಲಿಸಿದೆ.

ಅತಿಯಾದ ಮೇಕಪ್‌ ಬೇಡ, ಭಾನುವಾರ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ. ನಟನೆ ಹೊಸತು, ಹೀಗಾಗಿ ತಪ್ಪುಗಳ ಸಹಿಸಿಕೊಳ್ಳಬೇಕು ಎಂಬ ಷರತ್ತುಗಳನ್ನು ಹಾಕಿರುವ ಸುಧಾ ಮೂರ್ತಿ, ಅಂತಿಮವಾಗಿ ನಟಿಸಲು ಒಪ್ಪಿದ್ದಾರೆ. ಈ ಧಾರಾವಾಹಿಯಲ್ಲಿ ನಟ ಅನಂತನಾಗ್‌ ಮುಖ್ಯಪಾತ್ರದಲ್ಲಿದ್ದಾರೆ.

ರವಿ ಬೆಳಗೆರೆ ಇನ್ನೊಂದು ಅವತಾರ! : ‘ಮುಕ್ತ’ ಧಾರಾವಾಹಿಯಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಮಿಂಚಿದ್ದ ಪತ್ರಕರ್ತ ರವಿಬೆಳಗೆರೆಗೆ ಸಿನಿಮಾವೊಂದರಲ್ಲಿ ವಕೀಲನ ಪಾತ್ರ ಸಿಕ್ಕಿದೆಯಂತೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada