»   » ಬೆಳ್ತಂಗಡಿಯಲ್ಲಿ ಡಾ. ರಾಜ್‌ಗೆ ರಜತ ತುಲಾಭಾರ

ಬೆಳ್ತಂಗಡಿಯಲ್ಲಿ ಡಾ. ರಾಜ್‌ಗೆ ರಜತ ತುಲಾಭಾರ

Posted By: Staff
Subscribe to Filmibeat Kannada

ಬೆಳ್ತಂಗಡಿ: ಧರ್ಮಸ್ಥಳದ ಸಮೀಪದ ಶ್ರೀರಾಮ ಕ್ಷೇತ್ರದಲ್ಲಿ ನವೆಂಬರ್‌ 27ರಂದು ಡಾ. ರಾಜ್‌ಕುಮಾರ್‌ ಅವರಿಗೆ ರಜತ ತುಲಾಭಾರ ನಡೆಯಲಿದೆ.
ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ -

  • ಮಹಾಗಣಯಾಗ
  • ಅಮೃತ ಕುಂಭ ಕಲಶ ಸ್ಥಾಪನೆ
  • ವರನಟ ರಾಜ್‌ಕುಮಾರ್‌ಗೆ ತುಲಾಭಾರ

.. ಕಾರ್ಯಕ್ರಮಗಳನ್ನು ನವೆಂಬರ್‌ 27ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಿತ್ಯಾನಂದ ನಗರವು ರಾಷ್ಟ್ರದಲ್ಲೇ ಅಪೂರ್ವವಾದ ಕ್ಷೇತ್ರವಾಗಿದೆ. ರಾಜಸ್ಥಾನ, ಆಂಧ್ರ ಪ್ರದೇಶ, ಮದ್ರಾಸ್‌, ಗುಜರಾತ್‌ ಹಾಗೂ ಕರ್ನಾಟಕದ ಪಂಚ ಶಿಲ್ಪಿಗಳ ವಿಶಿಷ್ಟ ಶೈಲಿಗಳೊಂದಿಗೆ ಈ ದೇವಸ್ಥಾನವನ್ನು ರೂಪಿಸಲಾಗಿದೆ. ಇಲ್ಲಿನ ಅಮೃತ ಶಿಲೆಯ ಗರ್ಭ ಗುಡಿ 126 ಅಡಿ ಎತ್ತರವಿದೆ .

ಡಾ. ರಾಜ್‌ಕುಮಾರ್‌ ಅಭಿಮಾನಿಗಳು ನ.27 ಬುಧವಾರದ ಬೆಳಗ್ಗೆ ರಜತ ತುಲಾಭಾರ ನಡೆಸುವರು. ತುಲಾಭಾರಕ್ಕೆ ಬಳಸಿದ ಬೆಳ್ಳಿಯನ್ನು ದೇವರ ರಥ ನಿರ್ಮಾಣಕ್ಕೆ ಬಳಸಲಾಗುವುದು. ತುಲಾಭಾರದ ನಂತರ ಪಾರ್ವತಮ್ಮ ರಾಜ್‌ಕುಮಾರ್‌ ಅವರು ರಥ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡುವರು ಎಂದು ಸ್ವಾಮೀಜಿ ತಿಳಿಸಿದರು

ಅಂದಹಾಗೆ, 2003 ನೇ ಇಸವಿಯ ಫೆಬ್ರವರಿ ತಿಂಗಳಲ್ಲಿ ನಾಗಮಂಡಲ ಹಾಗೂ ಉದ್ಘಾಟನಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಕನ್ಯಾನ ಶ್ರೀರಾಮ ಕ್ಷೇತ್ರದಲ್ಲಿ ನಡೆಯಲಿವೆ.

English summary
Dr. Rajkumar will be honoured with Rajatha thulabhara in Belthangadi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada