»   » ಮುಂಬೈ ಸೆಳೆತ : ಸ್ಯಾಂಡಲ್ ವುಡ್ ಗೆ ಟಾಟಾ ಹೇಳಿದ ಡೈಸಿ!

ಮುಂಬೈ ಸೆಳೆತ : ಸ್ಯಾಂಡಲ್ ವುಡ್ ಗೆ ಟಾಟಾ ಹೇಳಿದ ಡೈಸಿ!

Posted By:
Subscribe to Filmibeat Kannada

ಕನ್ನಡದ ಹುಡುಗಿ ಡೈಸಿ ಬೋಪಣ್ಣ ಮತ್ತೆ ಮುಂಬೈ ಕಡೆ ಮುಖ ಮಾಡಿದ್ದಾರೆ. ಇಲ್ಲಿ ಮೂರು ಚಿತ್ರಗಳಿಗೆ ಸಿಗೋ ಸಂಭಾವನೆ ಅಲ್ಲಿ ಒಂದೇ ಚಿತ್ರಕ್ಕೆ ಸಿಕ್ಕುತ್ತದೆ ಅನ್ನೋದು ಕಾರಣವೇ? ಅವರು, ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ತಾತ್ಫುರ್ಯ ಮಾತ್ರ ಅದೇ. ಬೆಂಗಳೂರಿನಲ್ಲಿದ್ದ ಮನೆಯನ್ನು ಬಾಡಿಗೆಗೆ ಕೊಟ್ಟು, ಅವರು ಮುಂಬೈನ ಫ್ಲಾಟ್ ಹಿಡಿದಿದ್ದಾರೆ.

ಮುಂಬೈ ಡೈಸಿ ಅವರಿಗೆ ಹೊಸತೇನೂ ಅಲ್ಲ. ಡೈಸಿ ಎಂದರೆ ಬಾಲಿವುಡ್ ಮಂದಿಗೆ 'ಗರಂಮಸಾಲ' ನೆನಪಾಗುತ್ತದೆ. ಹೀಗಾಗಿಯೇ ಡೈಸಿ ಹಿಂದೆ ಸ್ಪೈಸಿ ಎಂಬ ಹೆಸರು ಸೇರಿಕೊಂಡಿದೆ. ನನ್ನ ವೃತ್ತಿ ಜೀವನಕ್ಕೆ ಅನುಕೂಲವಾಗಲಿ ಎಂದು ಮುಂಬೈಗೆ ಹೋಗುತ್ತಿದ್ದೇನೆ. ಕನ್ನಡದಲ್ಲಿ ಒಳ್ಳೆ ಅವಕಾಶ ಸಿಕ್ಕರೇ ಮತ್ತೆ ಮರಳುತ್ತೇನೆ. ಅಲ್ಲಿ ಅವಕಾಶಗಳಿವೆ ಹೀಗಾಗಿ ಸ್ಥಳ ಬದಲಾವಣೆ ಅಷ್ಟೆ ಎನ್ನುತ್ತಾರೆ ಡೈಸಿ. ಈ ಹಿಂದೆ ಇದೇ ನೆಪ ಹೇಳಿ ಭಾವನಾ ಮುಂಬೈ ಸೇರಿದ್ದರು.

'ಬಿಂಬ' ಮುಖಾಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಡೈಸಿ, ಸತ್ಯವಾನ ಸಾವಿತ್ರಿ, ಐಶ್ವರ್ಯ, ತವರಿನ ಸಿರಿ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಿನ 'ಗಾಳಿಪಟ'ದಲ್ಲೂ ಅವರು ನಟಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳಿದ್ದರೂ, ಕೈತುಂಬ ದುಡ್ಡು ಸಿಗುತ್ತಿಲ್ಲ ಅನ್ನೋದು ಡೈಸಿ ಕೊರಗು ಎನ್ನುತ್ತಾರೆ ಅವರ ಆತ್ಮೀಯರು.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada