»   » ಗೌಡ ಕಿರುಕುಳ, ಸುದೀಪ್‌ ದೂರು

ಗೌಡ ಕಿರುಕುಳ, ಸುದೀಪ್‌ ದೂರು

Posted By: Staff
Subscribe to Filmibeat Kannada

'ಮಹಾರಾಜ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಿರ್ಮಾಪಕ ಆರ್‌. ಎಸ್‌. ಗೌಡ ರೌಡಿಸಂ ಮಾಡಿ ನನಗೆ ಕಿರುಕುಳ ನೀಡಿದ್ದಾರೆಂದು ನಟ ಸುದೀಪ್‌ ಕಲಾವಿದರ ಸಂಘಕ್ಕೆ ಕಂಪ್ಲೇಂಟ್‌ ಕೊಟ್ಟಿದ್ದಾರೆ. ಕಂಪ್ಲೇಂಟಿನ ಒಂದು ಪ್ರತಿ ನಿರ್ದೇಶಕರ ಸಂಘಕ್ಕೆ ಬಂದಿದೆ.

ಹುಣಸೂರು ಕೃಷ್ಣ ಮೂರ್ತಿಗಳ 'ವೀರ ಸಂಕಲ್ಪ' ಚಿತ್ರ 1964ರಲ್ಲಿ ತೆರೆಕಂಡಿತ್ತು. ಆ ಚಿತ್ರದ ನಾಯಕ ನಟರಾದ ಬಿ. ಎಂ. ವೆಂಕಟೇಶ್‌ ಮತ್ತೆ 'ವೀರ ಸಂಕಲ್ಪ 'ಚಿತ್ರವನ್ನು ವಿಷ್ಣುವರ್ಧನ್‌ನಾಯಕತ್ವದಲ್ಲಿ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ.

ನಾಗಣ್ಣ ನಿರ್ದೇಶನದ ಶೈಲೇಂದ್ರಬಾಬು ನಿರ್ಮಾಣದ ಉಪೇಂದ್ರ ಅಭಿನಯದ 'ಗೌರಮ್ಮ' ಚಿತ್ರಕ್ಕೆ ನಾಯಕಿಯಾಗಿ ರಮ್ಯಾಆಯ್ಕೆಯಾಗಿದ್ದಾಳೆ.
ಶಿವರಾಜ್‌ಕುಮಾರ್‌ ಅಭಿನಯದ ಎಂ.ಎಸ್‌.ರಮೇಶ್‌ ನಿರ್ದೇಶನದ ವಾಲ್ಮೀಕಿ ಚಿತ್ರವನ್ನುನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ.
ಇದುವರೆಗೂ ಡ್ರಮ್ಮರ್‌ ಆಗಿ ದುಡಿಯುತ್ತಿದ್ದ ದೇವ ಅವರು 'ಶಾರ್ದೂಲ' ಎಂಬ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಶಾರ್ದೂಲ ಚಿತ್ರದ ಹಾಡುಗಳಿಗೆ ಧ್ವನಿ ಮುದ್ರಣ ಆಕಾಶ್‌ ಆಡಿಯೋದಲ್ಲಿ ನಡೆಯುತ್ತಿದೆ.

ರಾಜೇಶ್‌ಕುಮಾರ್‌ ನಿರ್ದೇಶದಲ್ಲಿ 'ಶಾರ್ದೂಲ' ಎಂಬ ಚಿತ್ರ ಜನವರಿ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಶ್ರೀರಂಗ ಅವರ ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ್ದು ಪಿ. ಕೆ. ಹೆಚ್‌. ದಾಸ್‌ ಛಾಯಾಗ್ರಹಣವಿದೆ. 'ದಯಾನಾಯಕ್‌' ದುಬೈಯಲ್ಲಿ ಡ್ಯುಯೆಟ್‌ ಮುಗಿಸಿಕೊಂಡು ಬಂದಿದೆ. ಡಿ. ರಾಜೇಂದ್ರಬಾಬು ಅವರ ನಿರ್ದೇಶನದ ಈ ಚಿತ್ರಕ್ಕೆ ಆರ್‌.ಪಿ. ಪಟ್ನಾಯಕ್‌ ರಾಗ ಸಂಯೋಜನೆ, ಹೆಚ್‌. ಸಿ. ವೇಣು ಛಾಯಾಗ್ರಹಣವಿದೆ.

(ಸ್ನೇಹಸೇತು: ವಿಜಯ ಕರ್ನಾಟಕ)

English summary
Titbits from Kannada filmdom

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada