»   » ಚಲನಚಿತ್ರ ಪ್ರಶಸ್ತಿ ಪ್ರದಾನಕ್ಕೆ ಕೂಡಿಬಂದ ಮುಹೂರ್ತ

ಚಲನಚಿತ್ರ ಪ್ರಶಸ್ತಿ ಪ್ರದಾನಕ್ಕೆ ಕೂಡಿಬಂದ ಮುಹೂರ್ತ

Posted By: Staff
Subscribe to Filmibeat Kannada

ಬೆಂಗಳೂರು : 2000 ಹಾಗೂ 2001 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು , ಡಿಸೆಂಬರ್‌ 26 ರಂದು ವರ್ಣರಂಜಿತ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಡಿ.26 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು 2000 ಹಾಗೂ 2001 ನೇ ಸಾಲಿನ ಪ್ರಶಸ್ತಿಗಳನ್ನು ವಿತರಿಸುವರು ಎಂದು ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಬುಧವಾರ (ಡಿ.11) ಸುದ್ದಿಗಾರರಿಗೆ ತಿಳಿಸಿದರು. ಹಿರಿಯ ನಟ, ನಿರ್ಮಾಪಕ ವಾದಿರಾಜ್‌ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿಗಳನ್ನು ಈಗಾಗಲೇ ಅಂತಿಮಗೊಳಿಸಿದೆ.

ಪ್ರತಿ ಕನ್ನಡ ಚಿತ್ರಕ್ಕೂ 5 ಲಕ್ಷ ರುಪಾಯಿ ಸಬ್ಸಿಡಿ ನೀಡುವಂತೆ ಕನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿರುವ ಮನವಿಯನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು. ಪ್ರಸ್ತುತ ಆಯ್ದ ಗುಣಾತ್ಮಕ ಚಿತ್ರಗಳಿಗೆ ಮಾತ್ರ ಸರ್ಕಾರ 20 ಲಕ್ಷ ರುಪಾಯಿ ಸಬ್ಸಿಡಿ ನೀಡುತ್ತಿದೆ.

(ಪಿಟಿಐ)

English summary
Karnataka Chief Minister S M Krishna would present the state film awards at a function on December 26th, 2002

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada