ದರ್ಶನ್ ಬಾಸ್ ರಕ್ಷಣೆಗೆ ಡ್ರೈವರ್ ಲಕ್ಷ್ಮಣ ಸಾಕ್ಷ್ಯ

ಘಟನೆ ನಡೆದ ದಿನ ಇನ್ನೋವಾ ಕಾರು ಚಾಲನೆ ಮಾಡುತ್ತಿದ್ದ ಲಕ್ಷ್ಮಣ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಬಾಸ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವೆ ನಡೆದಿದೆ ಎನ್ನಲಾದ ಕಿತ್ತಾಟದ ಬಗ್ಗೆ ನನಗೇನೂ ತಿಳಿದಿಲ್ಲ ಎಂದಿದ್ದಾನೆ. ಚಾಲಕನ ಸೀಟು ಹಾಗೂ ಹಿಂಬದಿ ಸೀಟಿಗೂ ಮಧ್ಯೆ ಪಾರ್ಟಿಷನ್ ಮಾಡಲಾಗಿದ್ದು, ಸೌಂಡ್ ಪ್ರೂಫ್ ಗಾಜು ಅಳವಡಿಸಲಾಗಿದೆ. ಆದ್ದರಿಂದ ನಾನೇನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾನೆ.
ಕಾಮಾಲೆ ರೋಗದಿಂದ ಇಲ್ಲಿನ ರಾಜೀವ್‌ಗಾಂಧಿ ಎದೆ ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದು, ಇಂದು ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಖುದ್ದು ಹಾಜರಾತಿ ಸಾಧ್ಯವಾಗದಿದ್ದರೆ, ದರ್ಶನ್ ಪರ ವಕೀಲರು ಹಾಜರಾತಿ ವಿನಾಯ್ತಿ ಕೋರಬಹುದು.
ನ್ಯಾಯಾಂಗ ಬಂಧನದಲ್ಲಿರುವ ಆತನ ಜಾಮೀನು ಅರ್ಜಿ ಸೋಮವಾರ (ಸೆ.12) ವಿಚಾರಣೆಗೆ ಬರಲಿದೆ. ದರ್ಶನ್‌ರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರ ಪತ್ನಿ ವಿಜಯಲಕ್ಷ್ಮಿ ರವಿವಾರ ಮಧ್ಯಾಹ್ನ ನಗರದ ಬಿಜಿಎಸ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅನಂತರ ಅವರು ನೇರವಾಗಿ ನಟ ದರ್ಶನ್ ದಾಖಲಾಗಿರುವ ಇಲ್ಲಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ಭೇಟಿ ನೀಡಿ ಪತಿಯ ಯೋಗಕ್ಷೇಮ ವಿಚಾರಿಸಿದರು.
ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ನಟ ದರ್ಶನ್ ಸೆ.12ರ ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದು, ಆಸ್ಪತ್ರೆಯಿಂದ ನೇರವಾಗಿ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆ ಯಲ್ಲಿ ನಗರದ 1ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಟ ದರ್ಶನ್ ವಿರುದ್ಧ ದೂರು ನೀಡಿದ್ದ ಪತ್ನಿ ವಿಜಯಲಕ್ಷ್ಮಿ ಸಂಧಾನಕ್ಕೆ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸಂಧಾನ ಪತ್ರ ನ್ಯಾಯಾಲಯಕ್ಕೆ ನೀಡಲಿದ್ದಾರೆ. ಸಂಧಾನ ಪತ್ರವನ್ನು ಪರಿಗಣಿಸಿದರೆ ಪ್ರಕರಣ ಸುಖಾಂತ್ಯ ಗೊಳ್ಳಲಿದೆ. ಇಲ್ಲವಾದರೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಲಿದೆ.


Click it and Unblock the Notifications











