For Quick Alerts
ALLOW NOTIFICATIONS  
For Daily Alerts

ನಟ ದರ್ಶನ್ ವಿವಾದ : ಚುರುಮುರಿ ಕಾಮೆಂಟ್ಸ್

By Prasad
|

ಸೆಲೆಬ್ರಿಟಿ(ಸಿನೆಮಾ ತಾರೆ)ಗಳ ಜೀವನದಲ್ಲಿ ಎಂತಹುದೇ ಅವಘಡ ಸಂಭವಿಸಿದಲ್ಲಿ ನಮ್ಮ ಸಮಾಜ ಹೇಗೆ ವರ್ತಿಸುತ್ತದೆ ಎನ್ನುವುದಕ್ಕೆ ಕನ್ನಡ ನಟ ದರ್ಶನ್ ಘಟನೆಯೇ ಒಂದು ತಾಜಾ ಉದಾಹರಣೆ. ಆತನ ಫ್ಯಾನ್ ಗಳು ನಡೆದುಕೊಂಡ ರೀತಿ, ಉಳಿದ ಸಿನೆಮಾ ತಾರೆಯರು ನೀಡಿದ ಹೇಳಿಕೆಗಳು, ಜೈಲಧಿಕಾರಿಗಳು, ವೈದ್ಯರು ನೀಡುತ್ತಿರುವ ಸರ್ಟಿಫಿಕೇಟುಗಳು, ನಿರ್ಮಾಪಕರ ಸಂಘ ಕೈಗೊಂಡ ಕ್ರಮ ಒಂದೊಂದು ಹೊಸ ಕಥೆಗಳನ್ನು ಹೇಳುತ್ತವೆ.

ಇದೆಲ್ಲ ಒಂದೆಡೆಯಾದರೆ ಏನೂ ನಡೆದೇ ಇಲ್ಲ ಎಂದು ಹೇಳಿ 'ಸತ್ಯ'ದ ತಲೆಯ ಮೇಲೆ ಗುದ್ದಿದಂತೆ 'ಸುಳ್ಳು' ಹೇಳಿ ಸತಿ ಸಾವಿತ್ರಿ ಪಟ್ಟಕ್ಕೇರಿದ ದರ್ಶನ್ ಹೆಂಡತಿ ವಿಜಯಲಕ್ಷ್ಮಿಯದು ಇನ್ನೊಂದು ಗೊಳಿನ ಕಥೆ. ಆಡುವ ಹಾಗೂ ಇಲ್ಲ ಅನುಭವಿಸುವ ಹಾಗೂ ಇಲ್ಲ ಎಂಬಂತಹ ವಿಚಿತ್ರ ಸಂದಿಗ್ಧತೆಯಲ್ಲಿ ಆಕೆ ಸಿಲುಕಿರುವುದು ಸತ್ಯ. ಈ ನಡುವೆ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ನಿರ್ಮಾಪಕರ ಸಂಘ ದರ್ಶನ್ 'ಗೆಳತಿ' ನಿಖಿತಾ ವಿರುದ್ಧ ಮೂರು ವರ್ಷ ನಿಷೇಧ ಹೇರಿದ್ದು ನಾಚಿಕೆಗೇಡಿನ ಸಂಗತಿ.

ದರ್ಶನ್ ಗೆ ಚಾಲೇಂಜಿಂಗ್ ಸ್ಟಾರ್ ಎಂಬ ಬಿರುದು ಹೇಗೆ ಬಂತೋ ಗೊತ್ತಿಲ್ಲ. ಆದರೂ ದರ್ಶನ್ ಅಭಿಮಾನಿಗಳು ಅಂದಿನಿಂದ ಇಂದಿನವರೆಗೆ ನಡೆದುಕೊಳ್ಳುತ್ತಿರುವ ರೀತಿ ಮತ್ತು ಅದನ್ನು ಅರ್ಥಮಾಡಿಕೊಳ್ಳುವುದು ನಿಜಕ್ಕೂ ಚಾಲೇಂಜಿಂಗ್ ವಿಷಯವೆ. ನಾಲಾರು ಸರಕಾರಿ ಬಸ್ಸುಗಳು ಕಲ್ಲುಗಳಿಗೆ ಗುರಿಯಾದವು, ಅನೇಕ ವಾಹನಗಳು ಜಖಂ ಆದವು, ಕೆಲವರು ಕೈಯಲ್ಲಿ ಕರ್ಪೂರದಾರತಿ ಹಚ್ಚಿದರು, ಹಲವರು ಆಸ್ಪತ್ರೆ ಎದುರಿಗೇ ಠಿಕಾಣಿ ಹೂಡಿದರು. ಅವರು ಮಾಡಿರುವ ನಷ್ಟಗಳಿಗೆ ಯಾರು ಹೊಣೆ? ದರ್ಶನ್ ಜವಾಬ್ದಾರಿ ಹೊರುವರೆ?

ದರ್ಶನ್ ಮುಂದೆ ಹೇಗೆ ಆದರ್ಶವಾಗಿ ಜೀವನ ನಡೆಸಬೇಕು? ನೊಂದಿರುವ ಜೀವಿ ವಿಜಯಲಕ್ಷ್ಮಿ ಏನು ಮಾಡಬೇಕು? ಅಭಿಮಾನಿಗಳು ಇನ್ನೂ ಮುಂದೆ ಯಾವ ರೀತಿ ವರ್ತಿಸಬೇಕು? ಚಿತ್ರರಂಗ ಹೇಗೆ ಅನ್ಯಾಯವಾದವರಿಗೆ ನ್ಯಾಯ ದೊರಕಿಸಿಕೊಡಬೇಕು? ಇಂತಹ ಘಟನೆಗಳಿಗೆ ಸಮಾಜದ ಪ್ರತಿಕ್ರಿಯೆ ಹೇಗೆ ಆರೋಗ್ಯಕರವಾಗಿರಬೇಕು? ನಾವೇನೇ ಅಂದುಕೊಂಡರೂ ಮುಂದೆ ಏನಾಗುತ್ತದೆ? ಎಂಬುದಕ್ಕೆ ಚುರುಮುರಿ ಬ್ಲಾಗಿನಲ್ಲಿ ನಾಸ್ತಿಕ ಅವರು ಬರೆದಿರುವ ಕಾಮೆಂಟ್ ಕನ್ನಡಿ ಹಿಡಿಯುತ್ತದೆ.

A follow up in any healthy society would be,

1) Vijayalakshmi continue her fight for justice.

2) Nikita to file a legal case against Karnataka film producers, for preventing her from earning her livelihood (guaranteed by Constitution).

3) Rest of the people act disinterested (Note: not uninterested, but disinterested) and mind their business.

But in our society, this will happen:

1) Vijayalakshmi withdraws her complaint.

2) Prosecution drops all charges.

3) Darshan walks free and declares Nikita is innocent.

4) Karnataka film producers lift ban on Nikita.

5) Things go on as if nothing as happened.

6) And few like me (with some decent public memory), will never watch any Darshan movie in future. [ದರ್ಶನ್ ಕರ್ಮಕಾಂಡದ ಇತ್ತೀಚಿನ ಸುದ್ದಿಗಳು]

English summary
Actor Darshan imbroglio : It is really surprising to see how the society is behaving. Should not the society be more responsible towards the victims? A comment by Nastika on Churumuri blog.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more