twitter
    For Quick Alerts
    ALLOW NOTIFICATIONS  
    For Daily Alerts

    ಸಿಗರೇಟು ಬಿಟ್ಟರೆ ನೂರ್ಕಾಲ ಬಾಳ್ತೀಯ ನನ್ನಣ್ಣ

    By * ಬಾಲರಾಜ್ ತಂತ್ರಿ
    |

    ಕನ್ನಡ ಚಿತ್ರರಂಗ ಕಂಡ ಒಬ್ಬ 'ಒಳ್ಳೆ ಮನುಷ್ಯ' ಹ್ಯಾಟ್ರಿಕ್ ಹೀರೊ. ನಾಟ್ಯ ಸಾರ್ವಭೌಮ ಶಿವರಾಜ್ ಕುಮಾರ್ ಮಂಗಳವಾರ (ಜುಲೈ 12) 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಲು, ಗೆಲುವು ಎರಡನ್ನು ಸಮನಾಗಿ ಸ್ವೀಕರಿಸುವ ಶಿವಣ್ಣ ಬಗ್ಗೆ ಕೆಲ ಸಾಲು ಬರೆಯುವ ಮೊದಲು ಅವರಿಗೆ ಜನ್ಮದಿನದ ಶುಭ ಹಾರೈಕೆ.

    ವರನಟ ಡಾ.ರಾಜ್ ಮತ್ತು ಪಾರ್ವತಮ್ಮ ದಂಪತಿಗಳ ಮೊದಲ ಕುಡಿ. ಪುಟ್ಟಸ್ವಾಮಿ ಆಲಿಯಾಸ್ ಶಿವರಾಜ್ ಕುಮಾರ್ ಜುಲೈ 12, 1961 ರಲ್ಲಿ ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ 1983ರಲ್ಲಿ ಬಿಎಸ್ಸಿ ಪದವೀಧರನಾದ ಮೇಲೆ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಸಲಹೆ ಮೇರೆಗೆ ಮದ್ರಾಸ್‌ನಲ್ಲಿ ನಟನೆಯ ಓನಾಮಗಳನ್ನು ಕಲಿತರು.

    ಕೂಚುಪುಡಿ ನೃತ್ಯದಲ್ಲಿ ಪರಿಣತರಾದ ಶಿವಣ್ಣ 1986ರಲ್ಲಿ ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ'ಆನಂದ್' ಚಿತ್ರದ ಮೂಲಕ ಟುವ್ವಿ ಟುವ್ವಿ ಎಂದು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆನಂದ್ ಚಿತ್ರದ ನಂತರ ತೆರೆಕಂಡ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಒಟ್ಟು ಮೂರೂ ಚಿತ್ರಗಳು ಸೂಪರ್ ಹಿಟ್ ಆಗುವ ಮೂಲಕ ಸ್ಯಾಂಡಲ್ ವುಡ್‌ನ ನ "ಹ್ಯಾಟ್ರಿಕ್ ಹೀರೋ" ಆದರು.

    ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಪುತ್ರಿ ಗೀತಾರನ್ನು ವರಿಸಿದ ಶಿವಣ್ಣಗೆ ನಿವೇದಿತಾ ಮತ್ತು ನಿರುಪಮಾ ಎನ್ನುವ ಇಬ್ಬರು ಪುತ್ರಿಯರು. ಶಿವಣ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು 25 ವರ್ಷ, ಈ ಇಪ್ಪತ್ತೈದು ವರ್ಷದ ಪಯಣದಲ್ಲಿ ಅನೇಕ ಏಳು ಬೀಳುಗಳನ್ನು ಕಂಡ ಇವರು ನಿರ್ಮಾಪಕರ ಪಾಲಿಗೆ ಬಹಳ ಅಚ್ಚುಮೆಚ್ಚಿನ ನಟ.

    ನಿರ್ಮಾಪಕರು ಕೋಟಿ ಕೋಟಿ ಸಂಭಾವನೆ ಬಾಕಿ ಉಳಿಸಿಕೊಂಡರೂ ಅಪ್ಪನ ಶಿಸ್ತಲ್ಲೇ ಬೆಳೆದುಬಂದ ಶಿವಣ್ಣ ಸೌಜನ್ಯ ಮತ್ತು ಮಾನವೀಯತೆಗೆಹೆಸರಾದವರು. ಡಾ.ರಾಜ್, ಅಂಬರೀಷ್, ವಿಷ್ಣುವರ್ಧನ್ ನಂತರ ಅತಿ ಹೆಚ್ಚು ಅಭಿಮಾನಿ ದೇವರುಗಳನ್ನು ಹೊಂದಿರುವ ನಟ.

    ಮೂರು ಸಾಲುಸಾಲು ಹಿಟ್ ಚಿತ್ರಗಳ ನಂತರ ಬಂದ ಸಂಯುಕ್ತ, ಅದೇರಾಗ ಅದೇಹಾಡು, ಗಡಿಬಿಡಿ ಅಳಿಯ, ಶಿವಸೈನ್ಯ ಸಿಂಹದ ಮರಿ, ಕುರುಬನ ರಾಣಿ, ಬಾವ ಬಾಮೈದ, ರಿಷಿ, ತವರಿಗೆ ಬಾ ತಂಗಿ, ರಾಕ್ಷಸ ಮುಂತಾದ ಚಿತ್ರಗಳು ಯಶಸ್ವಿಯಾದವು. ಇನ್ನು ಉಪೇಂದ್ರ ನಿರ್ದೇಶಿಸಿದ 'ಓಂ' ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನೇ ನೀಡಿತು.

    ಎಕೆ47, ನಮ್ಮೂರ ಮಂದಾರ ಹೂವೇ, ಜನುಮದ ಜೋಡಿ, ಜೋಗಿ, ಅಣ್ಣತಂಗಿ ಮತ್ತು ಇತ್ತೀಚಿನ ಮೈಲಾರಿ ಚಿತ್ರಗಳು ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡಿದ ಚಿತ್ರಗಳು. 18 ಗಂಟೆಯಲ್ಲಿ ಚಿತ್ರೀಕರಣ ಮುಗಿಸಿದ ಸುಗ್ರೀವ ಚಿತ್ರ ಕೂಡ ಇವರ ಸಾಧನೆಯಲ್ಲೊಂದು. ಶಿವಣ್ಣ ವೃತ್ತಿ ಜೀವನದ ಇನ್ನೊಂದು ಭಾರೀ ನಿರೀಕ್ಷೆಯ ಜೋಗಯ್ಯ ಬರುವ ತಿಂಗಳು ತೆರೆಗೆ ಬರಲು ರೆಡಿಯಾಗಿದ್ದರೆ, ಲಕ್ಷ್ಮಿ ಚಿತ್ರ ಶೂಟಿಂಗ್ ಹಂತದಲ್ಲಿದೆ.

    1995 ( ಓಂ), 1996 ( ನಮ್ಮೂರ ಮಂದಾರ ಹೂವೇ), 1999 ( ಎಕೆ 47) ಮತ್ತು ಪ್ರಸಕ್ತ ಸಾಲಿನ (2010) ಫಿಲಂಫೇರ್ ಪ್ರಶಸ್ತಿಯನ್ನು (ತಮಸ್ಸು) ಶಿವಣ್ಣ ಪಡೆದಿದ್ದರೆ, ನಾಲ್ಕುಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೆ ಉಜ್ವಲ ಎಕ್ಸ್‌ಪ್ರೆಸ್ ಅವಾರ್ಡ್, ಹೀರೋ ಹೊಂಡ ಎಕ್ಸ್ ಪ್ರೆಸ್ ಅವಾರ್ಡ್, ಆರ್ಯಭಟ ಪ್ರಶಸ್ತಿ, ಸ್ಕ್ರೀನ್ ಅವಾರ್ಡ್ ಮುಂತಾದವು ಈ ಪಟ್ಟಿಗೆ ಸೇರಿವೆ.

    ಇದಲ್ಲದೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಿವಣ್ಣ ಅವರ ವೃತ್ತಿ ಜೀವನ, ವೈಯಕ್ತಿಕ ಜೀವನ ಹಸನಾಗಿರಲಿ ಇನ್ನೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನದಣಿಸಲಿ ಎನ್ನುವುದು ಶಿವಣ್ಣ ಅಭಿಮಾನಿಗಳ ಬಯಕೆ. ಹಾಗೆಯೇ ಶಿವಣ್ಣನಿಗೆ ಒಂದು ಸಲಹೆ ಸಿಗರೇಟು ಬಿಟ್ಟರೆ ನೀನು ನೂರ್ಕಾಲ ಬಾಳ್ತೀಯಾ ನನ್ನಣ್ಣಾ.

    English summary
    Hat Trick Hero Shivarajkumar is celebrating his 49th birthday in grand style. Here is the facts and figures about the sandalwood king. Shivarajkumar from Anand to Jogayya. His 100th movie Jogayya is the sequel to his blockbuster movie Jogi. Wish him a very very happy birthday.
    Tuesday, July 12, 2011, 16:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X