ಕೈಮುರಿದರೂ ಸಿಸಿಎಲ್ ನಲ್ಲಿ ಆಡಲಿರುವ ಸುದೀಪ್

Sudeep
ಕನ್ನಡದ ನಟ ಕಿಚ್ಚ ಸುದೀಪ್ ಈ ತಿಂಗಳು ಹದಿನೈದರಿಂದ ನಡೆಯಲಿರುವ ಸಿಸಿಎಲ್ ಕ್ರಿಕೆಟ್, ಸೆಕೆಂಡ್ ಸೀಸನ್ ನಲ್ಲಿ ಕೈ ಮುರಿದುಕೊಂಡಿದ್ದರೂ ಆಡಲಿದ್ದಾರೆ. ಇತ್ತೀಚಿಗೆ ಪ್ರಾಕ್ಟಿಸ್ ಮಾಡುವಾಗ ಕೈ ಮುರಿದುಕೊಂಡಿದ್ದ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಸುದೀಪ್ ಆಡುವುದೇ ಅನುಮಾನ ಎನ್ನುವಂತಾಗಿತ್ತು.

ಆದರೆ ಹೆಸರಿಗೆ ತಕ್ಕಂತೆ ಕಿಚ್ಚು ಹೊಂದಿರುವ ಸುದೀಪ್, ಗಟ್ಟಿಯಾಗಿ ಬ್ಯಾಂಡೇಜ್ ಬಿಗಿದುಕೊಂಡು, ಕೈ ಕಟ್ಟಿಕೊಂಡೇ ಪ್ರಾಕ್ಟೀಸ್ ಗೆ ಬರುತ್ತಿದ್ದಾರೆ. ಅವರು ಟೂರ್ನಿಯಲ್ಲಿ ಆಡುವುದು ಗ್ಯಾರಂಟಿ ಮತ್ತು ಅವರೇ ಕ್ಯಾಪ್ಟನ್. ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಈ ಸಿಸಿಎಲ್ ಟೂರ್ನಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಇದೀಗ ಕ್ರಿಕೆಟ್ ಅಭ್ಯಾಸ ನಡೆಸುತ್ತಿರುವ ತಂಡ, ಜೊತೆಗೆ 'ಫಿಟ್ ನೆಸ್' ಗಾಗಿ ಯೋಗಾಭ್ಯಾಸವನ್ನೂ ನಡೆಸುತ್ತಿದೆ. ದರ್ಶನ್ ಕೂಡ ಸುದೀಪ್ ಜೊತೆ ಯೋಗಾಭ್ಯಾಸ ಹಾಗೂ ಪ್ರಾಕ್ಟೀಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಂಡದ ಎಲ್ಲ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಗೆಲ್ಲುವ ವಿಶ್ವಾಸಕ್ಕೆ ಎಲ್ಲರೂ ಬದ್ಧವಾಗಿದ್ದಾರೆ.

ಕೈ ಮುರಿದಿಕೊಂಡಿದ್ದರೂ ತಮ್ಮ ಇರುವಿಕೆ ಹಾಗೂ ನಾಯಕತ್ವವನ್ನು "Yes I'l b playing th 1st game at B'lore ths 15th..thnxx To Ramakanth,my physiotherapist..Lookin frwrd fr all ur support." ಎಂದು ಟ್ವೀಟ್ ಮಾಡುವ ಮೂಲಕ ಸುದೀಪ್ ಬಹಿರಂಗಪಡಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Kichcha Sudeep is the Captain and plays in the CCL, even he got injury on his hand. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X