»   » ವಿಷ್ಣು-ಸುಹಾಸಿನಿ ಜೋಡಿಯ 'ಮಾಸ್ಟರ್'ಕಥೆ ಏನು?

ವಿಷ್ಣು-ಸುಹಾಸಿನಿ ಜೋಡಿಯ 'ಮಾಸ್ಟರ್'ಕಥೆ ಏನು?

Posted By:
Subscribe to Filmibeat Kannada

ಅತ್ತ ಬೀಜಿಂಗ್‌ನಲ್ಲಿ 8-8-8-8-2008ರ ಶುಭ ಮುಹೂರ್ತದಲ್ಲಿ ಒಲಿಂಪಿಕ್ ಕ್ರೀಡೆಗಳು ಶುರುವಾದರೆ ಇತ್ತ ಕನ್ನಡ ಚಿತ್ರರಂಗದಲ್ಲಿ ಇದೇ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಷ್ಣುವರ್ಧನ್‌ರ 'ಮಾಸ್ಟರ್' ಚಿತ್ರ ಸೆಟ್ಟೇರಿದೆ. ಡಾ.ವಿಷ್ಣುವರ್ಧನ್, ಸುಹಾಸಿನಿ ಹಾಗೂ ನಿರ್ದೇಶಕ ದಿನೇಶ್ ಬಾಬು ಈ ಚಿತ್ರದ ಮೂಲಕ ಹ್ಯಾಟ್ರಿಕ್ ಜಯ ಸಾಧಿಸುವ ಕನಸು ಹೊತ್ತಿದ್ದಾರೆ.

ಇಲ್ಲಿಯವರೆಗೂ ನಾವು ಅಪರಹರಣಕ್ಕೋಳಗಾದವರ, ಸರ್ಕಾರದ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಗಳನ್ನು ಮಾತ್ರ ನೋಡಿರುತ್ತೀವಿ. ಆದರೆ, 'ಮಾಸ್ಟರ್' ಚಿತ್ರದಲ್ಲಿ ಅಪಹರಣಕ್ಕೊಳಗಾದ ಕುಟುಂಬ ಮಾನಸಿಕ ತೊಳಲಾಟವನ್ನು ದಿನೇಶ್ ಬಾಬು ತೆರೆಯ ಮೇಲೆ ತೋರಿಸಲಿದ್ದಾರೆ. ಮಾಸ್ಟರ್ ಕುಂಟುಂಬದಲ್ಲಿ ಮಗುವೊಂದು ಅಪಹರಣಕ್ಕೊಳಗಾಗುತ್ತದೆ. ಈ ಕುಂಟುಂಬಕ್ಕೆ ಗೃಹಸಚಿವರು ತೀರಾ ಹತ್ತಿರದ ಸಂಬಂಧಿಕರಾಗಿರುತ್ತಾರೆ ಆದಾಗ್ಯು ಕುಟುಂಬದವರು ಅನುಭವಿಸುವ ನೋವು,ಯಾತನೆಯನ್ನು ಹೃದಯ ಸ್ಪರ್ಶಿಯಾಗಿ ದಿನೇಶ್ ಬಾಬು ಬೆಳ್ಳಿಪರದೆಗೆ ತರಲಿದ್ದಾರೆ.

ಮುಕೇಶಿ ರಿಷಿ ಅಪಹರಣಕಾರನಾಗಿ ಹಾಗೂ ಅವಿನಾಶ್ ಗೃಹ ಸಚಿವನಾಗಿ ಅಭಿನಯಿಸಿದ್ದಾರೆ. ಬೇಬಿ ಬಿಂದ್ರಾ ಹಾಗೂ ಬೇಬಿ ಪ್ರೇರಣಾ ಅಪಹರಣಕ್ಕೊಳಗಾಗುವ ಮುಗ್ಧ ಮಕ್ಕಳು.

ಮಾಸ್ಟರ್‌ಗೆ ಕಥೆ,ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವನಿರ್ದೇಶಕ ದಿನೇಶ್ ಬಾಬುಗೆ ಇದು 27ನೇ ಚಿತ್ರ.ಗುಲಾಬಿ ಹೂಗಳ ವರ್ತಕ ಸಿ.ಆರ್.ಮೋಹನ್ ಚಿತ್ರದ ನಿರ್ಮಾಪಕ. 'ಮುಸ್ಸಂಜೆ ಮಾತು' ಚಿತ್ರಕ್ಕೆ ಉತ್ತಮ ಹಾಡುಗಳನ್ನು ಬರೆದ ವಿ.ಶ್ರೀಧರ್ ಈ ಚಿತ್ರಕ್ಕೂ ಹಾಡುಗಳನ್ನು ಬರೆದುಕೊಡಲಿದ್ದಾರೆ.

ನಟಿ ಸುಹಾಸಿನಿ ಹಾಗೂ ನಿರ್ದೇಶಕ ದಿನೇಶ್ ಬಾಬು ಅವರೊಂದಿಗೆ ಕೆಲಸ ಮಾಡುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ದಿನೇಶ್ ಬಾಬು ತುಂಬು ಮುಂದಾಲೋಚನೆಯ ನಿರ್ದೇಶಕ. ಪಂದ್ಯ ಗೆಲ್ಲುವುದಷ್ಟೇ ಅವರಿಗೆ ಮುಖ್ಯ ಎಂದು ವಿಷ್ಣು ಕೊಂಡಾಡಿದರು. ನಟಿ ಸುಹಾಸಿನಿ ಮಾತನಾಡುತ್ತಾ, 28 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ. ಈಗ ಪುನಃ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ ಸಿಗುತ್ತಿರುವುದು ನನ್ನ ಭಾಗ್ಯ ಎಂದರು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada