For Quick Alerts
  ALLOW NOTIFICATIONS  
  For Daily Alerts

  ದೇವೇಗೌಡರ ಪಕ್ಷ ಜೆಡಿಎಸ್‌ಗೆ ಪೂಜಾಗಾಂಧಿ ಎಂಟ್ರಿ

  By Rajendra
  |

  ನಟಿ ಪೂಜಾಗಾಂಧಿ ರಾಜಕೀಯ ಎಂಟ್ರಿಗೆ ವೇದಿಗೆ ಸಿದ್ಧವಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪಕ್ಷ ಜಾತ್ಯಾತೀತ ಜನತಾ ದಳಕ್ಕೆ ಸೇರ್ಪಡೆಯಾಗುವುದು ಖಚಿತವಾಗಿದೆ. ಗುರುವಾರ (ಜ.12) ಪೂಜಾಗಾಂಧಿ ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿಯ ಜೆಡಿಎಸ್ ಕಚೇರಿಗೆ ಭೇಟಿ ನೀಡಿ ಚಕಿತಗೊಳಿಸಿದರು.

  ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರೆಡ್ಡಿ ಅವರೊಂದಿಗೆ ಪೂಜಾಗಾಂಧಿ ಜೆಡಿಎಸ್ ಕಚೇರಿಗೆ ಆಗಮಿಸಿದ್ದರು. ಪೂಜಾಗಾಂಧಿ ಜೆಡಿಎಸ್‌ಗೆ ಸೇರ್ಪಡೆಯಾಗುವುದು ಖಚಿತವಾಗಿದೆಯಾದರೂ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

  ಶೀಘ್ರದಲ್ಲೆ ಅವರು ಜೆಡಿಎಸ್ ಸೇರ್ಪಡೆ ದಿನಾಂಕವನ್ನು ಪ್ರಕಟಿಸಲಿದ್ದಾರೆ. ಪೂಜಾಗಾಂಧಿ ಅಭಿನಯದ 'ದಂಡುಪಾಳ್ಯ' ಚಿತ್ರದ ಅರೆ ಬೆತ್ತಲೆ ಫೋಟೋವೊಂದು ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆ ಸುದ್ದಿಯ ಬೆನ್ನಲ್ಲೇ ರಾಜಕೀಯ ಎಂಟ್ರಿ ಸುದ್ದಿ ಬಂದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. (ಒನ್‌ಇಂಡಿಯಾ ಕನ್ನಡ)

  English summary
  According to reports it has been said that actress Pooja Gandhi has all set to enter politics. She has decided to join JD(S). On Thursday, 12th January she visit JD(S) office with JDS womens wing chief Jyothi Reddy.
 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X