ಯುವ ಕಾಂಗ್ರೆಸ್ ಚುನಾವಣಾ ಕಣಕ್ಕೆ ನಟಿ ರಮ್ಯಾ

By Rajendra

ಗೋಲ್ಡನ್ ಗರ್ಲ್ ರಮ್ಯಾ ಕಡೆಗೂ ರಾಜಕೀಯ ಕಣಕ್ಕೆ ಧುಮುಕಿದ್ದಾರೆ. ಸೆ.16ರಂದು ನಡೆಯಲಿರುವ ಬೂತ್ ಮಟ್ಟದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಮ್ಯಾ ಸ್ಪರ್ಧಿಸಲಿದ್ದು ಈಗಾಗಲೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಬೆಂಗಳೂರು ಲೋಕಸಭಾ ಕ್ಷೇತ್ರದ ಬೂತ್ ನಂಬರ್ 3ರಿಂದ ಅವರು ಅಖಾಡಕ್ಕೆ ಇಳಿಯಲಿದ್ದಾರೆ.

ಸೆಪ್ಟೆಂಬರ್ 16ರಂದು ರಾಜ್ಯದಾದ್ಯಂತ ಬೂತ್ ಮಟ್ಟದ ಚುನಾವಣೆ ನಡೆಯಲಿದೆ.ರಮ್ಯಾ ಚುನಾವಣೆಗೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಗುಮಾನಿ ಅವರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇಂದು ಅವರು ನಾಮಪತ್ರ ಸಲ್ಲಿಸುವ ಮೂಲಕ ರಮ್ಯಾ ರಾಜಕೀಯ ಎಂಟ್ರಿ ಖಚಿತವಾಗಿದೆ.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ, ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಮೊಮ್ಮಗ ರೆಹಮಮಾನ್, ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ವ ಸೇರಿದಂತೆ ಹಲವು ಪ್ರಮುಖ ಮುಖಂಡರ ಸಂಬಂಧಿಗಳು ಸ್ಪರ್ಧಿಸಲಿದ್ದು, ರಮ್ಯಾ ಅವರಿಗೆ ತೀವ್ರ ಸ್ಪರ್ಧೆ ಎದುರಾಗಲಿದೆ.

ಈ ಹಿಂದೆ ರಮ್ಯಾ ತಾವು ಎರಡು ದೋಣಿಗಳಲ್ಲಿ ಪಯಣಿಸುತ್ತಿಲ್ಲ. ತಮ್ಮ ಪಯಣ ಏನಿದ್ದರೂ ಒಂದೇ ದೋಣಿಯಲ್ಲಿ ಸಾಗಲಿದೆ ಎಂದು ಸ್ಪಷ್ಟಪಡಿಸಿದ್ದರು. ಈಗ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮೂಲಕ ರಮ್ಯಾ ರಾಜಕೀಯ ಪಯಣಕ್ಕೆ ಒಂದು ಮಹತ್ವದ ತಿರುವು ಸಿಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Yes no, yes no..finally Kannada actress Golden girl Ramya set to contest for Karnataka State Youth Congress, at booth (3) level. According to sources, sons of many senior political leaders are in field and Ramya has to compete with them. The elections will be held on 16th September all over Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X