ತೆಲುಗಿನಲ್ಲಿ ನಟಿ ಸಮಂತಾ ರೇಟು ಒಂದು ಕೋಟಿ!
ದಕ್ಷಿಣ ಭಾರತದಲ್ಲಿ ಕೋಟಿ ಕೋಟಿ ಎಣಿಸುವ ತಾರೆಗಳಿಗೇನು ಬರವಿಲ್ಲ. ತ್ರಿಷಾ ಕೃಷ್ಣನ್, ಇಲಿಯಾನಾ, ತಮನ್ನಾ ಭಾಟಿಯಾರಂತಹ ಸಿನಿ ತಾರೆಯರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಕಣ್ಣಲ್ಲೇ ಕೊಲ್ಲುವ ನಟಿ ಸಮಂತಾ ಕೂಡ ಈಗ ಕೋಟಿಗೊಬ್ಬಳು!
ತೆಲುಗಿನಲ್ಲಿ ಈಕೆ ಅಭಿನಯದ ಏ ಮಾಯ ಚೇಸಾವೋ, ಬೃಂದಾವನಂ ಸೇರಿದಂತೆ ಇತ್ತೀಚೆಗೆ ತೆರೆಕಂಡ ದೂಕುಡು ಚಿತ್ರಗಳು ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡಿವೆ. ಈಗ ಈಕೆಯ ಸಂಭಾವನೆ ಒಂದು ಕೋಟಿಗೆ ತಲುಪಿದೆ. ತೆಲುಗಿನಲ್ಲಿ ಈಕೆ ಇತ್ತೀಚೆಗೆ ಸಹಿ ಹಾಕಿರುವ ಚಿತ್ರಕ್ಕೆ ಒಂದು ಕೋಟಿ ಸಂಭಾವನೆ ಪಡೆದಿದ್ದಾರೆ.
ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಜೊತೆಗಿನ ಈ ಚಿತ್ರಕ್ಕೆ ಸಮಂತಾಗೆ ಬೊಂಬಾಟ್ ಆಫರ್ ಸಿಕ್ಕಿರುವುದು ಟಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈಕೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿರುವ ಕಾರಣಕ್ಕೋ ಏನೋ ತೆಲುಗಿನಲ್ಲಿ ಈಕೆಯನ್ನು ಗೋಲ್ಡನ್ ಲೆಗ್ ಎಂದೇ ಕರೆಯಲಾಗುತ್ತಿದೆ. ತೆಲುಗಿನಲ್ಲಿ ನಲ್ಲ ಸುದೀಪ್ ಅಭಿನಯಿಸುತ್ತಿರುವ 'ಈಗ' (ನೊಣ ಎಂದರ್ಥ) ಚಿತ್ರದಲ್ಲೂ ಸಮಂತಾ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











