»   » ನಗೆದೋಣಿಯೇರಿದ ಅಳುಮುಂಜಿ ಶ್ರುತಿ

ನಗೆದೋಣಿಯೇರಿದ ಅಳುಮುಂಜಿ ಶ್ರುತಿ

Subscribe to Filmibeat Kannada

*ಜಯಂತಿ

Shruti and S Mahendar
ನಾನೀಗ ಕಂಪ್ಯೂಟರ್ ಮುಂದೆ ಕುಳಿತಿದ್ದೇನೆ. ಎಡಿಟಿಂಗ್ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿಕೊಂಡು ಎಡಿಟಿಂಗ್ ಕಲಿಯುವ ಪ್ರಯತ್ನದಲ್ಲಿದ್ದೇನೆ ಎಂದರು ಶ್ರುತಿ.

'ಅಕ್ಕ ತಂಗಿ' ಚಿತ್ರ ಗೆಲುವಿನ ಲಯ ಕಂಡುಕೊಂಡಂತಿದೆ. ಈ ಚಿತ್ರದಲ್ಲಿ ಶ್ರುತಿ ಅಭಿನಯದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಅಳುಮುಂಜಿ ಪಾತ್ರಗಳಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಶ್ರುತಿ, ನವಿರು ಹಾಸ್ಯದ ಪ್ರಬುದ್ಧ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡಿರುವುದನ್ನು ಪ್ರೇಕ್ಷಕ ಒಪ್ಪಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಶ್ರುತಿ ಅವರನ್ನು ಮತ್ತಷ್ಟು ಪಾತ್ರಗಳು ಹುಡುಕಿಕೊಂಡು ಬರಬೇಕಲ್ಲವಾ?

ಶ್ರುತಿ ಅವಕಾಶಗಳ ಬಗ್ಗೆ ಮಾತನಾಡಲಿಲ್ಲ. ಮಾತನಾಡಿದ್ದು ಸಮಯದ ಅಭಾವದ ಬಗ್ಗೆ. ಬಂದ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳಲು ಸಮಯವೆಲ್ಲಿದೆ. ಮನೆಯಲ್ಲೇ ಸಾಕಷ್ಟು ಪಾತ್ರಗಳಿವೆ. ಹೆಂಡತಿ ಪಾತ್ರ, ಅಮ್ಮನ ಪಾತ್ರ, ಗೃಹಿಣಿಯ ಪಾತ್ರ- ಇವುಗಳಿಗೆಲ್ಲ ನಾನು ನ್ಯಾಯ ಸಲ್ಲಿಸಬೇಕು. ಈ ಪಟ್ಟಿಗೀಗ ಚುನಾವಣೆಯ ಓಡಾಟ ಬೇರೆ ಸೇರಿಕೊಂಡಿದೆ. ಇಷ್ಟೊಂದು ಚಟುವಟಿಕೆಯ ಹೆಣ್ಣುಮಗಳಿಗೆ ಸಮಯದ ಅಭಾವ ಸಹಜವೇ.

ಮುಂದಿನ ಪ್ರಶ್ನೆ ಕೂಡ ಸಮಯಕ್ಕೆ ಸಂಬಂಧಿಸಿದ್ದೇ. ಒಂದು ವಾರ ಬಿಡುವ ಸಿಕ್ಕರೆ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಯದು. ವಾರ ಬಿಡುವು ಸಿಕ್ಕರೆ ವೀಣೆ ಕಲೀತೀನಿ. ಸಂಗೀತ ಅಭ್ಯಾಸ ಮುಂದುವರಿಸ್ತೀನಿ. ಒಂದಷ್ಟು ಸಿನಿಮಾ ನೋಡ್ತೀನಿ ಎಂದರು ಶ್ರುತಿ.

ಮಾತು ಮತ್ತೆ ಹೊರಳಿದ್ದು ಅಕ್ಕತಂಗಿ ಬಗ್ಗೆ. ಅದು ನಮ್ಮ ಕೂಸೂರೀ ಎಂದರು ಶ್ರುತಿ ಥೇಟ್ ಅಮ್ಮನ ದನಿಯಲ್ಲಿ. 'ಈ ಸಿನಿಮಾಕ್ಕೆಂದು ಮಹೇಂದರ್ ಜೊತೆ ಕೂತು ಚಿತ್ರಕಥೆ ಅರಳುವಲ್ಲಿ, ಮಾತುಗಳು ರೂಪುಗೊಳ್ಳುವಲ್ಲಿ ದುಡಿದಿದ್ದೇನೆ. ಕಾಸ್ಟ್ಯೂಮ್ ಬಗ್ಗೆ ಗಮನ ಹರಿಸಿದ್ದೇನೆ. ಇದು ಬೇರೆಯವರ ಸಿನಿಮಾ ಎಂದು ನಾನು ನಟಿಸಲಿಲ್ಲ. ನನ್ನದೇ ಸಿನಿಮಾ ಎಂದು ನಟಿಸಿದೆ" ಎಂದರು. ಪ್ರಬುದ್ಧತೆ ಎಂದರೆ ಇದಲ್ಲವೇ? ಅಂದಹಾಗೆ, ಶ್ರುತಿ ಚಿತ್ರರಂಗಕ್ಕೆ ಬಂದು ಇಪ್ಪತ್ತು ವರ್ಷಗಳಾದವು. ನಟಿಸಿದ ಸಿನಿಮಾಗಳ ಸಂಖ್ಯೆ ನೂರು ಮುಟ್ಟಿತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada