For Quick Alerts
  ALLOW NOTIFICATIONS  
  For Daily Alerts

  ಅದ್ಭುತ ಕಲೆಗಾರ ಜಾನ್ ನ ಮಕ್ಕಳ ಚಿತ್ರ

  By Mahesh
  |
  ಸಕಲ "ಕಲಾ" ವಲ್ಲಭ ಜಾನ್ ದೇವರಾಜ್ ಸಿನಿಮಾ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ದೇಶ ವಿದೇಶಗಳಲ್ಲಿ ಸುತ್ತಿ ಸಾಕಷ್ಟು ಮಾಹಿತಿ ಕಲೆ ಹಾಕಿ, ಉತ್ತಮ ಮಕ್ಕಳ ಚಿತ್ರ ರೂಪಿಸಿದ್ದಾರೆ. "ಆನಂದ" ಎಂಬ ಹೆಸರಿನ ಈ ಚಿತ್ರದ ಪ್ರದರ್ಶನವನ್ನು ಮಕ್ಕಳ ದಿನಾಚರಣೆ(ನ.14)ಯ ದಿನ ಜಯನಗರದ 9ನೇ ಬ್ಲಾಕ್ ನ ರಾಗಿಗುಡ್ಡ ಸ್ಲಮ್ ನಲ್ಲಿ ಹಮ್ಮಿಕೊಂಡಿದ್ದಾರೆ. ಜಪಾನ್ ಹಾಗೂ ಜೆಕ್ ರಾಷ್ಟ್ರದಲ್ಲಿ ಪ್ರದರ್ಶನಗೊಂಡಿರುವ ಆನಂದ ಚಿತ್ರ, ಮಕ್ಕಳ ಸಮಸ್ಯೆ ಸುತ್ತ ಸುತ್ತುತ್ತದೆ.

  ಬಾಲ ಕಾರ್ಮಿಕರ ಸಮಸ್ಯೆಗಳು, ಪರಿಹಾರ, ಶಿಕ್ಷಣ ವ್ಯವಸ್ಥೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಮಕ್ಕಳ ಕರುಣಾಜನಕ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ. ಬಡತನ, ಅನಕ್ಷರತೆ ಹಾಗೂ ಸೈನ್ಯಕ್ಕೆ ದೇಶ ವ್ಯಯಿಸುತ್ತಿರುವ ಖರ್ಚು ವೆಚ್ಚ ಕುರಿತು ಕೂಡಾ ಈ ಕಿರುಚಿತ್ರದಲ್ಲಿ ಹೇಳಲಾಗಿದೆ ಎನ್ನುತ್ತಾರೆ ಜಾನ್ .

  ಬಾರ್ನ್ ಫ್ರೀ ಆರ್ಟ್ ಸ್ಕೂಲ್ ಬ್ಯಾನರ್ ಅಡಿಯಲ್ಲಿ ಚಿತ್ರಿತವಾಗಿರುವ "ಅನಂದ" ಸಿನಿಮಾದಿಂದ ಸಮಾಜಿಕ ಸಂದೇಶ ರವಾನೆ ಮಾಡಲು ಜಾನ್ ಇಚ್ಛಿಸಿದ್ದಾರೆ. ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಬಾಲ ಕಾರ್ಮಿಕ ಸಮಸ್ಯೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಬೇಕು ಎಂಬ ಉದ್ದೇಶದಿಂದ ಆನಂದ ಚಿತ್ರವನ್ನು ಇತರೆ ಭಾಷೆಗಳಿಗೆ ಡಬ್ ಮಾಡುವ ಯೋಜನೆ ಕೂಡಾ ಹಾಕಿಕೊಂಡಿದ್ದಾರೆ.

  ಯಾರಿದು ಜಾನ್ ದೇವರಾಜ್ : ತೆರೆ ಹಿಂದಿನ ಕಲಾತ್ಮಕ ಶತಿ ಜಾನ್ ದೇವರಾಜ್ ಎಲ್ಲ ಬಗೆಯ ಕಲೆ , ಸಾಂಸ್ಕೃತಿಕ ರಂಗದಲ್ಲಿ ಪಳಗಿದವರು. ಬೀದಿ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ, ಚಿತ್ರಕಲೆ, ಶಿಲ್ಪಕಲೆ ಹೀಗೆ ಹತ್ತು ಹಲವು ರಂಗದಲ್ಲಿ ತೊಡಗಿಸಿಕೊಂಡವರು. ಇದರ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸದಾ ಪಾಲ್ಗೊಳ್ಳುವುದು ಇವರ ವೃತ್ತಿ ಹಾಗೂ ಪ್ರವೃತ್ತಿಯಾಗಿದೆ.

  ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥೆಯಲ್ಲಿ ಬರುವ ಊರಿನ ಚಿತ್ರಣಕ್ಕೆ ನೈಜ ರೂಪ ಕೊಟ್ಟ ಕಲಾವಿದ ಜಾನ್. ಶಂಕರ್ ನಾಗ್ ನಿರ್ದೇಶನದಂತೆ ಅದ್ಭುತ ಸೆಟ್, ಶಿಲ್ಪಗಳನ್ನು ರೂಪಿಸಿ ಯಶಸ್ವಿಯಾದವರು. ಕುಬಿ ಮತ್ತು ಇಯಾಲಾ, ಮನೆ, ಮುತ್ತಿನ ಹಾರ, ಹರಕೆಯ ಕುರಿ, ಹಗಲು ವೇಷ ಮುಂತಾದ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದಾರೆ.

  ಮೈಮ್ ಕಲೆ ಆಧಾರಿಸಿ 19 ನಿಮಿಷಗಳ ಚಿತ್ರ ತಯಾರಿಸಿದ್ದಾರೆ. ಬಾಷಾ ಎಂಬ ಮೂಕಿ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡಿದೆ. ಈಗ ಮಕ್ಕಳ ಚಿತ್ರದ ಮೂಲಕ ಮತ್ತೊಮ್ಮೆ ಜಾನ್ ಸಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ

  English summary
  Veteran art director John Devaraj has directed ‘Ananda’ a children film revolves around child labour problems. He is screening the film at Ragi Gudda Jayanagar 9th block slum at 6 pm on Nov.14. Movie has already been screen in Japan and Czech countries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X