ಜಾಲಿಡೇಸ್ ಗೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ

By Staff

ಜಾಲಿಡೇಸ್
ಯಂಗ್ ಡ್ರೀಂಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ 'ಜಾಲಿಡೇಸ್' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರದ ಯಾವುದೇ ಭಾಗಕ್ಕೂ ಮಂಡಲಿಯಿಂದ ಕತ್ತರಿ ಪ್ರಯೋಗವಾಗಿಲ್ಲ. ಬದಲಾಗಿ ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ ಎಂದು ನಿರ್ಮಾಪಕ ಮಾದಿರೆಡ್ಡಿ ಪರಮ್ ತಿಳಿಸಿದ್ದಾರೆ.

ನಿಗದಿತ ಯೋಜನೆಯಂತೆ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳನ್ನು ಪೂರೈಸಿರುವ 'ಜಾಲಿಡೇಸ್'ನ ಹಾಡುಗಳು ಎಲ್ಲರೂ ಗುನುಗುವಂತಿದೆ. ಚಿತ್ರದ ಧ್ವನಿಸುರುಳಿಗಳು ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿದ ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೃಷ್ಣಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಿಕ್ಕಿ ಜೆ ಮಯೂರ್ ಅವರ ಸಂಗೀತವಿದೆ. ಸೌಂದರ್‌ರಾಜ್ ಸಂಕಲನ, ಬಿ.ಎ.ಮಧು ಸಂಭಾಷಣೆ, ಕವಿರಾಜ್ ಗೀತರಚನೆ ಹಾಗೂ ರಂಸ್ವಾಮಿ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಶ್ವಾಸ್, ದೀಪು, ಪ್ರವೀಣ್, ನಿರಂಜನ್, ಐಶ್ವರ್ಯನಾಗ್ ಮುಂತಾದವರಿದ್ದಾರೆ. ಕಮಿಂಗ್ ಡೇಸ್‌ನಲ್ಲಿ 'ಜಾಲಿಡೇಸ್' ಚಿತ್ರವನ್ನು ಬಿಡುಗಡೆ ಮಾಡುವ ತಯಾರಿ ನಿರ್ಮಾಪಕರಿಂದ ನಡೆದಿದೆ.

ಬಿರುಗಾಳಿ

chetan
ಆದರ್ಶ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಬಿರುಗಾಳಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು,ಎ ಅರ್ಹತಾಪತ್ರವನ್ನು ನೀಡಿದೆ. 'ಆ ದಿನಗಳು' ಚಿತ್ರದ ಮೂಲಕ ಎಲ್ಲರ ಮನ ಸೂರೆಗೊಂಡ ಚೇತನ್ 'ಬಿರುಗಾಳಿ'ಯಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. 'ಗೆಳೆಯ' ಚಿತ್ರವನ್ನು ನಿರ್ದೇಶಿಸಿದ್ದ ನೃತ್ಯ ನಿರ್ದೇಶಕ ಹರ್ಷ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯದಲ್ಲೇ 'ಬಿರುಗಾಳಿ' ಕರ್ನಾಟಕದ ನೆಚ್ಚಿನ ಚಿತ್ರಮಂದಿರಗಳಲ್ಲಿ ಬೀಸಲಿದೆ.

ಆದರ್ಶ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮನೋಜ್‌ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ಅರ್ಜುನ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ, ದೀಪು ಎಸ್ ಕುಮಾರ್ ಸಂಕಲನ, ಯೋಗಾನಂದ ಸಂಭಾಷಣೆ, ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ ಗೀತರಚನೆ, ಮಹೇಶ್, ಯೋಗಿ ಸಹನಿರ್ದೇಶನ ಹಾಗೂ ರಮೇಶ್ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ಸಿತಾರವೈದ್ಯ, ಮೊನಿಶಾ, ಕಿಶೋರ್, ಮೈಕೋನಾಗರಾಜ್, ಪರಮೇಶಿ, ಕುರಿಗಳು ಪ್ರತಾಪ್, ಗಿರಿ, ಪವನ್, ಕರಿಷ್ಮಾ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜಾಲಿಡೇಸ್ ನ ಹೃದಯಸ್ಪರ್ಶಿ ಗೀತೆ
ಜಾಲಿ ಡೇಸ್ ಕಾರ್ಯಕ್ರಮದಲ್ಲಿ ಶ್ರೀಶಾಂತ್
ಬಿರುಗಾಳಿಯಾದ ಆ ದಿನಗಳು ಖ್ಯಾತಿಯ ಚೇತನ್

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X