For Quick Alerts
  ALLOW NOTIFICATIONS  
  For Daily Alerts

  'ಅಟ್ಟಹಾಸ' ಚಿತ್ರಕ್ಕೆ ನಕ್ಕೀರನ್ ಗೋಪಾಲ್ ಬ್ರೇಕ್

  By Rajendra
  |

  ದಂತಚೋರ, ಕಾಡುಗಳ್ಳ, ನರಹಂತಹ ವೀರಪ್ಪನ್ ಜೀವನಕತೆಯಾಧಾರಿತ ಚಿತ್ರ 'ಅಟ್ಟಹಾಸ' ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಏ.17ರವರೆಗೆ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಚೆನ್ನೈ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧ ಹೇರಿದೆ.

  ನಮ್ಮ ಅನುಮತಿ ಪಡೆಯದೆ ಚಿತ್ರವನ್ನು ಎಎಂಆರ್ ರಮೇಶ್ ತೆರೆಗೆ ತರುತ್ತಿದ್ದಾರೆ ಎಂದು ನಕ್ಕೀರನ್ ಪತ್ರಿಕೆಯ ಸಂಪಾದಕ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಅಟ್ಟಹಾಸ ಚಿತ್ರ ಬಿಡುಗಡೆಗೆ ಕೋರ್ಟ್ ನಿರ್ಬಂಧ ವಿಧಿಸಿದೆ.

  ವರನಟ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಬರುವಲ್ಲಿ ಮಹತ್ತರ ಪಾತ್ರ ವಹಿಸಿದ ನಮ್ಮನ್ನು ಚಿತ್ರದ ನಿರ್ದೇಶಕರು ಒಮ್ಮೆಯೂ ಸಂರ್ಪಿಸಿಲ್ಲ ಎಂಬುದು ಗೋಪಾಲ್ ಅವರ ಪ್ರಮುಖ ಆರೋಪ.

  ಚಿತ್ರದಲ್ಲಿ ತಮ್ಮ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿರುವುದಾಗಿಯೂ ಗೋಪಾಲ್ ತಿಳಿಸಿದ್ದಾರೆ. ಆದರೆ ಡಾ.ರಾಜ್ ಕುಟುಂಬ ಅಟ್ಟಹಾಸ ಚಿತ್ರಕ್ಕೆ ಈಗಾಗಲೆ ಗ್ರೀನ್ ಸಿಗ್ನಲ್ ನೀಡಿದೆ. (ಏಜೆನ್ಸೀಸ್)

  English summary
  The Chennai city civil court has restrained the producer of Tamil film Vana Yudham, including the Kannada version Attahasa, which is based on the life of forest brigand Veerappan, from exhibiting the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X