ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ವಾರ ಪತ್ರಿಕೆ ಸಿನಿಗಂಧ

ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿನಿಗಂಧದ ಹಲವು ವಿಶೇಷತೆಗಳಲ್ಲಿ ಒಂದು-ಕಾಲಂಗಳ ಕಲರವ. ಇಲ್ಲಿ ಸಿನಿಮಾಗೆ ಸಂಬಂಧಿಸಿದ ಒಂದಷ್ಟು ಕೌತುಕ ಕಾಲಂಗಳು ಇವೆ. ಒಬ್ಬ ಸಾಮಾನ್ಯ ಓದುಗನ ಅಭಿರುಚಿಗೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಚಿತ್ರೋದ್ಯಮದ ಹಲವು ಮುಖ-ಭಾವಗಳು ಗೋಚರವಾಗುತ್ತವೆ. ಜೊತೆಜೊತೆಗೆ ಒಂದಷ್ಟು ಓದಿಸಿಕೊಂಡು ಹೋಗುವ ವರ್ಗದ ಲೇಖನಗಳು ಪುಟಗಳನ್ನು ಇನ್ನಷ್ಟು ಅಲಂಕಾರ ಮಾಡಿವೆ.
ಜುಲೈ9ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾವಿಕ ಸಮ್ಮೇಳನದಲ್ಲಿ ಸಿನಿಗಂಧ ಪತ್ರಿಕೆಯನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಯಿತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬ ದಿನ (ಜು.12) ಸಿನಿಗಂಧ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಸಿನಿಗಂಧ ವಾರ ಪತ್ರಿಕೆಯ ಹಿಂದಿರುವ ಶಕ್ತಿ ಎಚ್ ಡಿ ನಾಯಾಯಣ ಬಾಬು, ಕನ್ನಡ ಚಿತ್ರರಂಗದ ಬಗೆಗೆ ಅಪಾರ ಒಲವು ನಿಲುವುಳ್ಳ ವ್ಯಕ್ತಿ . ಇವರು ಪತ್ರಿಕೆಯ ಪ್ರಧಾನ ಸಂಪಾದಕರು ಕೂಡ ಹೌದು. ಈಗಾಗಲೆ ಕನ್ನಡ ಚಿತ್ರರಂಗವನ್ನು ಹಲವಾರು ಕೋನಗಳಲ್ಲಿ ಕಂಡಿರುವ, ನುರಿತ ವರದಿಗಾರ ವಿನಾಯಕರಾಮ್ ಕಲಗಾರು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ.
ರಾಕ್ ಲೈನ್ ವೆಂಕಟೇಶ್, ಯೋಗರಾಜ್ ಭಟ್, ಎಚ್ ಎಂ ರಾಮಚಂದ್ರ, ಸುಮನಾ ಕಿತ್ತೂರು, ಬಿ ಸುರೇಶ್, ಕೋಮಲ್, ದೀಪಕ್ ಸಾಗರ ಮತ್ತಿತ್ತರ ಮಿತ್ರರು ಸಂಪಾದಕೀಯ ಸಲಹಾ ಮಂಡಳಿಯಲ್ಲಿದ್ದಾರೆ. ಹೊಸ ಮತ್ತು ಹಳೆ ತಲೆಮಾರಿನ ಕೊಂಡಿಯಾಗಿ ಪತ್ರಿಕೆ ಧ್ವನಿಸಲಿ. ಪತ್ರಿಕೆ ನಿಮ್ಮದಾಗಲಿ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











