ದರ್ಶನ್, ವಿಜಯಲಕ್ಷ್ಮಿ ನನ್ನ ಕ್ಷಮೆ ಕೇಳಲಿ: ನಟಿ ನಿಖಿತಾ

'ಅವರಿಬ್ಬರೂ ಏನೂ ನಡೆದೇ ಇಲ್ಲ ಎಂಬಂತೆ ಈಗ ಪಚಪಚ ಆಗಿದ್ದಾರೆ. ಒಳ್ಳೇದೇ. ಆದರೆ ಮಧ್ಯೆ ನಾನು ಬಲಿಪಶುವಾಗಿದ್ದಾನೆ. ಆದ್ದರಿಂದ ಅವರಿಬ್ಬರೂ ಸಾರ್ವಜನಿಕವಾಗಿ ತಕ್ಷಣ ನನ್ನ ಬಳಿ ಕ್ಷಮೆಯಾಚಿಸಬೇಕು. ಅವರ ಕರೆಗಾಗಿ ಕಾಯುತ್ತಿದ್ದೇನೆ' ಎಂದು ಪುಣ್ಯಾತಿಗಿತ್ತಿ ನಿಖಿತಾ ತುಕ್ರಾಲ್ ವಿವಾದಕ್ಕೆ ಮತ್ತೆ ಕಿಚ್ಚು ಹಚ್ಚಿದ್ದಾರೆ.
ಅಂದಹಾಗೆ ಮುಂಬೈನಿಂದಲೇ ಆಂಗ್ಲ ದೈನಿಕವೊಂದಕ್ಕೆ ಸಂದರ್ಶನ ನೀಡಿರುವ ನಿಖಿತಾ ಕಳೆದೊಂದು ತಿಂಗಳಿಂದ ಮುಂಬೈ ಬಿಟ್ಟು ಕದಲಿಲ್ಲ. 'ಕಾಟನ್ ಪೇಟೆ, ಪ್ರಿಯಸಖಿ ಮತ್ತು ಸಂಗೊಳ್ಳಿ ರಾಯಣ್ಣ ಸಿನಿಮಾಗಳ ಶೂಟಿಂಗ್ ಇನ್ನೂ ಮುಗಿದಿಲ್ಲ. ಅವುಗಳಲ್ಲಿ ನಾನಿನ್ನೂ ಅಭಿನಯಿಸಬೇಕಿದೆ. ಅದಕ್ಕೂ ಮುನ್ನ ಇಬ್ಬರೂ ಒಮ್ಮೆ ನನ್ನ ಕ್ಷಮೆಯಾಚಿಸಲಿ. ಅಲ್ಲಿಗೆ ಎಲ್ಲ ಸುಖಾಂತ್ಯ ಕಾಣುತ್ತದೆ' ಎಂದು ನಿಖಿತಾ ಮೇಡಂ ಅಲವತ್ತುಕೊಂಡಿದ್ದಾರೆ.
English summary
Kannada Actor Darshan and his wife Vijaylakshmi should apologise me personally says Mumbai actress Nikita Thukral.


Click it and Unblock the Notifications