»   »  'ಜುಗಾರಿ' ಚಿತ್ರಕ್ಕೆ ಡಿ ಐ ತಂತ್ರಜ್ಞಾನ

'ಜುಗಾರಿ' ಚಿತ್ರಕ್ಕೆ ಡಿ ಐ ತಂತ್ರಜ್ಞಾನ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

    ಸಿ.ಎಂ ಅಸೋಸಿಯೆಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಜುಗಾರಿ ಚಿತ್ರಕ್ಕೆ ಚೆನ್ನೈನ ಸುಪ್ರಸಿದ್ದ ಸ್ಟೂಡಿಯೋದಲ್ಲಿ ಡಿ ಐ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ನಿರ್ಮಾಪಕ ಜಿ.ಆರ್.ರಮೇಶ್ ತಿಳಿಸಿದ್ದಾರೆ.

    ಸುಂದರ ಹೊರಾಂಗಣದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ವಿಶಿಷ್ಟ ಕಥಾ ಹಂದರ ಹೊಂದಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವ ರಮೇಶ್ ಅವರು ಈ ಚಿತ್ರದಿಂದ ಕಥೆಗಾರನಾಗೂ ಪರಿಚಯವಾಗುತ್ತಿದ್ದಾರೆ. 'ಹಲವು ವರ್ಷಗಳಿಂದ ದಿನಪತ್ರಿಕೆಗಳನ್ನು ಓದುತ್ತಿರುವ ಅಭ್ಯಾಸವೇ ನನಗೆ ಕಥೆ ಬರೆಯಲು ಸ್ಪೂರ್ತಿ' ಎನ್ನುತ್ತಾರೆ ಅವರು.

    ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ಎಂದು ಖ್ಯಾತರಾಗಿ, ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿರುವ ನಟ ನರಸಿಂಹರಾಜು ಅವರ ಮೊಮ್ಮಕ್ಕಳು ಈ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾಗುತ್ತಿದ್ದಾರೆ. ಅವರ ಮೊಮ್ಮಗ ಎಸ್.ಡಿ.ಅರವಿಂದ್ ಈ ಚಿತ್ರದ ನಿರ್ದೇಶಕರಾದರೆ, ಅರವಿಂದರ ಸಹೋದರ ಅವಿನಾಶ್ ದಿವಾಕರ್ 'ಜುಗಾರಿಯಲ್ಲಿ ನಾಯಕನಾಗಿ ನಟಿಸಿದ್ದಾರೆ.

    ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಅವರ ಸಂಗೀತವಿದೆ. ಅನಂತ್ ಅರಸ್ ಕ್ಯಾಮೆರಾ, ಶ್ರೀ ಸಂಕಲನ, ರವಿವರ್ಮ ಸಾಹಸ, ನಾರಾಯಣಸ್ವಾಮಿ, ಕೆ.ಕಲ್ಯಾಣ್ ಹಾಗೂ ಎಸ್.ಡಿ.ಅರವಿಂದ್ ಗೀತರಚನೆಯಿರುವ 'ಜುಗಾರಿ'ಯ ತಾರಾಬಳಗದಲ್ಲಿ ಅವಿನಾಶ್ ದಿವಾಕರ್, ಹರ್ಷಿಕಾ ಪೂಣಚ್ಛ, ಅವಿನಾಶ್, ಸರತ್ ಲೋಹಿತಾಶ್ವಾ, ಬಿ.ಸುರೇಶ್, ಧರ್ಮ, ಮೋಹನ್ ಜುನೇಜಾ, ಗಿರಿಜಾ ಲೋಕೇಶ್, ಅಚ್ಯುತ್‌ಕುಮಾರ್ ಮುಂತಾದವರಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Kannada Photos

    Go to : More Photos

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more