ಸುಮ್ ಸುಮ್ನೆ ನಗ್ತಾಳೆ ಡಾ.ಚಾಂದಿನಿ ಎರಡನೇ ಇನ್ನಿಂಗ್ಸ್

ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿದ್ದ 'ದೀಪಾವಳಿ' ಚಿತ್ರದ ಬಳಿಕ ಚಾಂದಿನಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. ಬಳಿಕ ಆಕೆ ಫುಡ್ ಅಂಡ್ ಅಗ್ರಿಕಲ್ಚರ್ ಮಾರ್ಕೆಟಿಂಗ್ ಕುರಿತು ಮಹಾಪ್ರಬಂಧವೊಂದನ್ನು ಸಿದ್ಧಪಡಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಪಿ ಎಚ್.ಡಿ. ಪದವಿಯನ್ನೂ ಪಡೆದಿದ್ದರು. ಈ ಮಹಾಪ್ರಬಂಧಕ್ಕೆ ವಿಷಯ ಸಂಗ್ರಹಿಸಲು ಕರ್ನಾಟಕದ ಹಲವಾರು ಹಳ್ಳಿಗಳನ್ನು ಸುತ್ತಿದ್ದರು.
ಚಾಂದಿನಿ ಎದುರಿಸಿದ ಮೊದಲ ಶಾಟ್-ಉಪೇಂದ್ರ ಈಕೆಯನ್ನು ತಳ್ಳುವುದು, ಮೇಲೆ ಬೀಳುವುದು. ಇದನ್ನು ಸಲೀಸಾಗಿ ನಿರ್ವಹಿಸಿದರು. ಆಗ ಕೈಮೈಯಲ್ಲೆಲ್ಲಾ ತರಚು ಗಾಯಗಳಾಗಿದ್ದವಂತೆ. ಆದರೆ ಉಪೇಂದ್ರ ತನ್ನ ನಟನೆಯ ಬಗ್ಗೆ ಸೂಚಿಸಿದ್ದ ಮೆಚ್ಚುಗೆ ಆ ನೋವನ್ನು ಮರೆಸಿತಂತೆ. ಎ ಮತ್ತು ಎಕೆ 47 ಚಿತ್ರಗಳಲ್ಲೂ ಅಭಿನಯಿಸಿರುವ ಚಾಂದಿನಿ ಈಗ ಸೋನಿ ಎಂಟರ್‌ಟೈನ್‌ಮೆಂಟ್ ಡಿಸ್ಟ್ರಿಬ್ಯೂಷನ್ ಹೆಡ್ ಆಗಿ ಹೊಸ ಜವಾಬ್ದಾರಿಯನ್ನು ಹೊತ್ತಿದ್ದಾರೆ. (ಏಜೆನ್ಸೀಸ್)
More from Filmibeat
English summary
Kannada A and AK 47 films fame Dr Chandini what she is doning now? After she completed doctorate degree, Chandini is now heading the Sony Entertainment distribution head and professor at Manipal Group of College.


Click it and Unblock the Notifications











